ರೈತರು ಕೇಳಿದ ಪ್ರಶ್ನೆಗೆ ಸಂಸದ ಡಿ.ಕೆ. ಸುರೇಶ್ ಗರಂ!?

ರೈತರು ಕೇಳಿದ ಪ್ರಶ್ನೆಗೆ ಸಂಸದ ಡಿ.ಕೆ. ಸುರೇಶ್ ಗರಂ!?

ಮಾಗಡಿ: ಮಾಗಡಿ ತಾಲೂಕಿನ ಸೀಗೇಕುಪ್ಪೆ ಗ್ರಾಮಪಂಚಾಯಿತಿಯಲ್ಲಿ ಜನತಾದರ್ಶನ ಸಂಪರ್ಕ ಸಭೆ ನಡೆಯಿತು. ಈ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ರೈತರು ಕೇಳಿದ ಪ್ರಶ್ನೆಗೆ ಡಿಕೆ ಸುರೇಶ್ ಅವರು ಗರಂ ಆಗಿದ್ದಾರೆ.

ನಾವು ಈಗಾಗಲೇ ರಾಜ್ಯದ ಜನತೆಗೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿ ಸಾರ್ವಜನಿಕರಿಗೆ ಸಹಾಯವಾಗಲೆಂದು ನಮ್ಮ ಕಾಂಗ್ರೆಸ್ ಸರ್ಕಾರ ಶತಾಯಗತಾಯ ಎಂದು ಗ್ಯಾರಂಟಿಗಳನ್ನು ಪೂರೈಸುತ್ತಿದೆ. ಆದರೆ ನೀವುಗಳು ಇನ್ನು ನಮಗೆ ಅದು ಬೇಕು ಇದು ಬೇಕು ಎಂದರೆ ಹೇಗೆ? ಹಿಂದಿನ ಬಿಜೆಪಿ ಸರ್ಕಾರ ನಿಮಗೆ ಯಾವ ರೀತಿಯ ಸಹಾಯ ಮಾಡಿದೆ ಎಂದು ನೀವು ಒಂದು ಸಾರಿ ಯೋಚಿಸಿ ಎಂದು ಹೇಳಿದರು.

ಇಂದು ನಾವು ಬಂಗಾರಪ್ಪ ಅವರನ್ನ ನೆನೆಸಿಕೊಳ್ಳಬೇಕು. ಮಾಡಿದ್ದೆಲ್ಲ ನಮ್ಮದಲ್ಲ, ಮಾಡದಿರೋದೆಲ್ಲ ನಮಗೆ ಬೇಕು ಅನ್ನೋದನ್ನ ಬಿಡಿ ಎಂದು ಹೇಳಿದರು. ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ದುಡ್ಡು ಕೊಡುತ್ತಿದ್ದೇವೆ. ಇಡೀ ದೇಶದಲ್ಲೇ ಯಾರು ಕೂಡ 24 ಸಾವಿರ ಕೊಟ್ಟಿಲ್ಲ. ನಿಮ್ಮ ಪಂಚಾಯತಿಯಲ್ಲಿ 1480 ಜನರಿಗೆ ಹಣ ಬರುತ್ತಿದೆ. ನಿಮಗೆ ಬರೋದನ್ನ ಕೊಟ್ಟಸ್ಟು ಇನ್ನೂ ಅದು ಕೊಡಿ ಇದು ಕೊಡಿ ಅನೋದನ್ನ ಬಿಡಿ ಎಂದು ಹೇಳಿದರು.

ದಿನ ಜೆಡಿಎಸ್, ಬಿಜೆಪಿ ಅವರ ಬಳಿ ಬಾಯಿಗೆ ಬಂದ ಹಾಗೆ ಬೈಸಿಕೊಳ್ಳುತ್ತಿದ್ದೇವೆ. ನೀವು ಇನ್ನೂ ಅದು ಕೊಡಿ ಇದು ಕೊಡಿ ಅನ್ನುತ್ತಿದ್ದೀರಿ. ಇವರ್ಯಾರೋ ರಸ್ತೆ ಮಾಡಿಸಿ, ಮೋರಿ ಮಾಡಿಸಿ ಅಂತಾರೆ. ಅವರ್ಯಾರೋ ಇನ್ನೇನೋ ಕೇಳ್ತಾರೆ. ಜಮೀನ್ ಕೊಟ್ಟಿದ್ದೇವೆ ಫ್ರೀ ಆಗಿ. ಉಳುವವನೇ ಭೂಮಿಯ ಒಡೆಯ ಕಾನೂನು ತಂದಿದ್ದೇವೆ. ಇದನ್ನೆಲ್ಲ ತಂದಿರೋದು ನಿಮಗೋಸ್ಕರ. ಯಾರಾದರೂ ನೆನೆಸಿಕೊಳ್ಳುತ್ತಿದ್ದೀರಾ ನೀವು? ಇದನ್ನೆಲ್ಲ ಜೆಡಿಎಸ್- ಬಿಜೆಪಿ ಅವರು ಮಾಡಿಸಿಕೊಟ್ಟಿದ್ರಾ? ಎಂದು ಪ್ರಶ್ನಿಸಿದರು.

 

Related