ಕ್ವಾ.ಫೈನಲ್ ನಲ್ಲಿ ಸಿಂಧುಗೆ ಆಘಾತ

ಕ್ವಾ.ಫೈನಲ್ ನಲ್ಲಿ ಸಿಂಧುಗೆ ಆಘಾತ

ಬರ್ಮಿಂಗ್ಹ್ಯಾಮ್, ಮಾ.14 : ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕೂಟದಿಂದ ಭಾರತದ ಅಗ್ರ ಶ್ರೇಯಾಂಕಿತ ಮಹಿಳಾ ಸಿಂಗಲ್ಸ್ ಆಟಗಾರ್ತಿ ಪಿ.ವಿ.ಸಿಂಧು ಹೊರನಡೆದಿದ್ದಾರೆ.
ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು 21-12, 15-21, 13-21 ಗೇಮ್ಗಳ ಅಂತರದಿಂದ ಜಪಾನಿನ ಅಗ್ರ ಶ್ರೇಯಾಂಕಿತ ತಾರೆ ನಜೋಮಿ ಒಕುಹರಾ ವಿರುದ್ಧ ಸೋಲು ಅನುಭವಿಸಿದರು. ಮತ್ತೂಂದು ಪಂದ್ಯದಲ್ಲಿ ಮಹಿಳಾ ಡಬಲ್ಸ್ ಜೋಡಿಯಾದ ಕರ್ನಾಟಕದ ಅಶ್ವಿನಿ ಪೊನ್ನಪ್ಪ -ಎನ್.ಸಿಕ್ಕಿ ರೆಡ್ಡಿ ಹೊರಬಿದ್ದಿದ್ದಾರೆ. ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ನೇರ ಗೇಮ್ಗಳ ಅಂತರದಿಂದ ಜಪಾನಿನ ಮಿಸಾಕಿ ಮಟ್ಸುಟೊಮೊ -ಅಯಾಕಾ ತಕಹಾಶಿ ಜೋಡಿಯ ಎದುರು 13-21, 14-21 ಗೇಮ್ ಗಳ ಅಂತರದಿಂದ ಅಶ್ವಿನಿ ಜೋಡಿ ಸೋಲು ಅನುಭವಿಸಿತು.
ನೇರ ಗೇಮ್ ಆಘಾತ: ವಿಶ್ವ 29 ನೇ ಶ್ರೇಯಾಂಕಿತ ಅಶ್ವಿನಿ ಪೊನ್ನಪ್ಪ -ಎನ್.ಸಿಕ್ಕಿ ರೆಡ್ಡಿ ಎಲ್ಲಿಯೂ ಎಚ್ಚೆತ್ತುಕೊಂಡು ಹೋರಾಟ ನಡೆಸಲಿಲ್ಲ. ಅನಗತ್ಯ ಹೊಡೆಗಳಿಗೆ ಕೈ ಹಾಕಿ ಅಂಕಗಳನ್ನು ಕಳೆದುಕೊಂಡರು. ಮೊದಲ ಸೆಟ್ನಲ್ಲಿ 13-21ರಿಂದ ಆಘಾತ ಅನುಭವಿಸಿ 1-0 ಹಿನ್ನಡೆ ಅನುಭವಿಸಿದರು. ಎರಡನೇ ಸೆಟ್ನಲ್ಲಿ ಜಪಾನಿ ಆಟಗಾರ್ತಿಯರು ಮೇಲುಗೈ ಸಾಧಿಸಿ ಪಂದ್ಯ ಕೈವಶ ಮಾಡಿಕೊಂಡರು.

Related