ಈ ಜ್ಯೂಸ್ ಕುಡಿದ್ರೆ ಸಿಗರೇಟ್ ಚಟ ಬಿಡಬಹುದಂತೆ!

ಈ ಜ್ಯೂಸ್ ಕುಡಿದ್ರೆ ಸಿಗರೇಟ್ ಚಟ ಬಿಡಬಹುದಂತೆ!

ಬೆಂಗಳೂರು, ಮಾ. 4 : ಧೂಮಪಾನ ಆರೋಗ್ಯಕ್ಕೆ ಹಾಕಿಕಾರಕ ಎಂದು ಗೊತ್ತಿದ್ದರೂ ಅದನ್ನು ಬಿಡುವುದು ಅಷ್ಟೊಂದು ಸುಲಭವಲ್ಲ. ತಂಬಾಕಿನಲ್ಲಿರುವ ನಿಕೋಟಿನ್ ಅಂಶ ನಮ್ಮನ್ನು ಸಿಗರೇಟಿಗೆ ದಾಸರನ್ನಾಗಿಸುತ್ತದೆ. ಈ ಚಟದಿಂದ ಮುಕ್ತಿ ಹೊಂದಲು ಅನೇಕರು ವಿಫಲ ಯತ್ನ ನಡೆಸುತ್ತಲೇ ಇರುತ್ತಾರೆ. ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ಕಾರಣವಾಗುತ್ತಿರುವ ತಂಬಾಕು ಸೇವನೆಯಿಂದ ಮುಕ್ತಿ ಪಡೆಯಲು ಅನೇಕ ಚ್ಯುಯಿಂಗಮ್ಗಳೂ ಸಹ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಆದರೆ ಇದನ್ನು ಬಳಸಿದರೂ ಫಲಿತಾಂಶ ಮಾತ್ರ ಶೂನ್ಯ ಎಂಬುದು ಧಮ್ ಪ್ರಿಯರ ಮಾತು. ಆದರೀಗ ಧೂಮಪಾನವನ್ನು ತೊಡೆದು ಹಾಕುವುದು ಹೇಗೆ ಎಂಬುದರ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಈ ಮಹತ್ತರ ಸಂಶೋಧನೆಯಿಂದ ನಿಂಬೆ ರಸವನ್ನು ಕುಡಿದರೆ ಸಿಗರೇಟಿಗೆ ಕಿಕ್ ಕೊಡಬಹುದು ಎಂದು ತಿಳಿಸಲಾಗಿದೆ.

Related