ಇವರೇ ನೋಡಿ ಕೇಂದ್ರದಲ್ಲಿ ಸರ್ಕಾರ ರಚನೆ ಕಿಂಗ್ ಮೇಕರ್ಸ್…!

ಇವರೇ ನೋಡಿ ಕೇಂದ್ರದಲ್ಲಿ ಸರ್ಕಾರ ರಚನೆ ಕಿಂಗ್ ಮೇಕರ್ಸ್…!

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ನಿನ್ನೆ (ಜೂನ್‌ 04 ಮಂಗಳವಾರ) ಹೊರಬಿದ್ದಿದ್ದು, ಇದರಲ್ಲಿ ಬಿಜೆಪಿ ಪಕ್ಷಕ್ಕೆ ತಾನು ಅಂದುಕೊಂಡಷ್ಟು ಸ್ಥಾನಗಳು ಸಿಗದ ಕಾರಣ ಇದೀಗ ಬೇರೆ ಪಕ್ಷವನ್ನು ಅವಲಂಬಿಸಬೇಕಾದ ಅನಿವಾರ್ಯ ಬಿಜೆಪಿ ಪಕ್ಷಕ್ಕೆ ಬಂದೊದಗಿದೆ.

ಹೌದು, ಲೋಕಸಭಾ ಚುನಾವಣೆ 2024ನೇ ಸಾಲಿನಲ್ಲಿ ಈ ಬಾರಿ ಎನ್​ಡಿಎಗೆ ತಾನು ಅಂದುಕೊಂಡಷ್ಟು ಸ್ಥಾನಗಳನ್ನು ಗೆಲ್ಲುವುದು ಸಾಧ್ಯವಾಗದ ಕಾರಣ ಇದೀಗ ತನ್ನ ಮಿತ್ರ ಪಕ್ಷಗಳ ಮೇಲೆ ಅವಲಂಬಿತವಾಗಬೇಕಾದ ಸಂದರ್ಭ ಈಗ ಎನ್​ಡಿಎಗೆ ಪಕ್ಷಕ್ಕೆ ಅನಿವಾರ್ಯವಾಗಿದೆ.

ಹಾಗಾಗಿ ಬಿಜೆಪಿಗೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅಥವಾ ಚಂದ್ರಬಾಬು ನಾಯ್ಡು ಟಿಡಿಪಿ  ಬೆಂಬಲ ಬೇಕೇ ಬೇಕಾಗುತ್ತದೆ ಹಾಗಾಗಿ ಬಿಜೆಪಿ ಈಗ ಮಿತ್ರ ಪಕ್ಷಗಳ  ಮೇಲೆ ಅವಲಂಬನೆ ಯಾಗುವುದು ಅನಿವಾರ್ಯವಾಗಿದೆ.

ಯೆಸ್..‌.ಕೇಂದ್ರದಲ್ಲಿ ಸರ್ಕಾರ ರಚಿಸಬೇಕಾದರೆ ಬಿಜೆಪಿಗೆ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅಥವಾ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಬೆಂಬಲ ಬೇಕೇಬೇಕು. ಹೀಗಾಗಿ, ಈ ಇಬ್ಬರು ನಾಯಕರು ಇದೀಗ ಕಿಂಗ್ ಮೇಕರ್ ಆಗಿದ್ದಾರೆ. ಇದನ್ನೂ ಓದಿ: ಕಂಗನಾ ರಣಾವತ್ ಗೆ ಭರ್ಜರಿ ಜಯ

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗಿ ಹೊರಹೊಮ್ಮಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಇಂದು (ಜೂನ್ 5) ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ಬಿಜೆಪಿ ಬಹುಮತದ ಮಾರ್ಕ್ 272 ಅನ್ನು ತಲುಪಲು ವಿಫಲವಾದ ನಂತರ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಪಾಲುದಾರರ ಅಗತ್ಯವಿದೆ. ನಿತೀಶ್ ಅವರ ಜೆಡಿಯು ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನ ಗೆದ್ದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ 12 ಸ್ಥಾನಗಳನ್ನು ಗೆದ್ದಿದೆ.

ಜೆಡಿ (ಯು) ಮತ್ತು ಟಿಡಿಪಿ ಎರಡೂ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದೆ. ಆದರೆ ಇಂಡಿಯ ಬಣದವರು ಈ ಎರಡೂ ಪಕ್ಷದವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ ಬಿಜೆಪಿಗೆ ಅಧಿಕಾರಕ್ಕೇರುವುದು ಕಷ್ಟವಾಗುತ್ತದೆ. ಒಂದುವೇಳೆ ಟಿಡಿಪಿ ಮತ್ತು ಜೆಡಿಯು ತಮ್ಮ 27 ಸ್ಥಾನಗಳೊಂದಿಗೆ ಇಂಡಿಯ ಬ್ಲಾಕ್‌ಗೆ ಬೆಂಬಲ ಘೋಷಿಸಿದರೆ ಇಂಡಿಯ ಬಣಕ್ಕೆ ಬಹುಮತ ಸಿಗುವ ಸಾಧ್ಯತೆಯಿದೆ.

 

Related