ಬಿಜೆಪಿಯ ಹಿರಿಯ ನಾಯಕರನ್ನು ಪ್ರಶ್ನಿಸುವ ನೈತಿಕತೆ ಯತ್ನಾಳ್ ಗಿಲ್ಲ: ರೇಣುಕಾಚಾರ್ಯ

ಬಿಜೆಪಿಯ ಹಿರಿಯ ನಾಯಕರನ್ನು ಪ್ರಶ್ನಿಸುವ ನೈತಿಕತೆ ಯತ್ನಾಳ್ ಗಿಲ್ಲ: ರೇಣುಕಾಚಾರ್ಯ

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿಯ ಎದ್ದಂತೆ ಕಾಣುತ್ತಿದೆ. ಸ್ವಪಕ್ಷ ನಾಯಕರುಗಳೇ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಹೌದು, ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ತರಾಟೆಗೆ ತೆಗೆದುಕೊಂಡರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ಮಾತನಾಡಲು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಯತ್ನಾಳ್ ವಿರುದ್ಧ ಗುಡುಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷನ ಆಯ್ಕೆಯನ್ನು ಮಾಡಿರುವುದು ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ದ ಅವರು. ಹಾಗಾದ್ರೆ ಯತ್ನಾಳ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಸನಗೌಡ ಒಬ್ಬ ಹಿರಿಯ ನಾಯಕನಾಗಿರುವುದರಿಂದ ಅವರ ಬಗ್ಗೆ ಗೌರವ ಇದೆ, ಆದರೆ ಅವರು ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ಮೇಲಿಂದ ಮೇಲೆ ಟೀಕಿಸುವ ಮೂಲಕ ಜನರ ದೃಷ್ಟಿಯಲ್ಲಿ ಖಳನಾಯಕನಾಗುತ್ತಿದ್ದಾರೆ. ಅಸಲಿಗೆ ಯಡಿಯೂರಪ್ಪರನ್ನು ಟೀಕಿಸುವ ನೈತಿಕ ಹಕ್ಕು ಯತ್ನಾಳ್ ಗೆ ಇಲ್ಲ, ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ ಮತ್ತು ಅಮಿತ್ ಶಾ. ಯತ್ನಾಳ್ ವರಿಷ್ಠರ ಅಯ್ಕೆ ಪ್ರಶ್ನಿಸುವಷ್ಟು ದೊಡ್ಡವರೇ ಎಂದು ರೇಣುಕಾಚಾರ್ಯ ಹೇಳಿದರು.

 

Related