ರಾಜ್ಯದಲ್ಲಿ ಕೆಂಪು ಸುಂದ್ರಿಗೆ ಎಲ್ಲಿಲ್ಲದ ಬೇಡಿಕೆ

  • In State
  • July 31, 2023
  • 199 Views
ರಾಜ್ಯದಲ್ಲಿ ಕೆಂಪು ಸುಂದ್ರಿಗೆ ಎಲ್ಲಿಲ್ಲದ ಬೇಡಿಕೆ

ಬೆಂಗಳೂರು: ರಾಜ್ಯದ ಜನತೆಗೆ ಈಗಾಗಲೇ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಕಳೆದ ಒಂದು ತಿಂಗಳಿಂದ ಕೆಂಪು ಸುಂದ್ರಿ ಅಂದ್ರೆ ಟೊಮೆಟೊ ಒಂದು ಕೆಜಿಗೆ ಸುಮಾರು 100 ರಿಂದ 150 ಇತ್ತು. ಆದರಿಗ ಬೆಲೆ ಸತತವಾಗಿ ಹೆಚ್ಚುತ್ತಿರುವುದರಿಂದ ರೈತರ ಮುಖದಲ್ಲಿ ಸಂತೋಷ ಉಂಟಾಗಿದ್ದು ಇನ್ನೂ ಗ್ರಾಹಕರ ಮುಖದಲ್ಲಿ ಸಂಕಷ್ಟ ಉಂಟಾಗುತ್ತಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಟೊಮೆಟೊ ಬಿತ್ತನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ. 3 ತಿಂಗಳಿನಿಂದ ಟೊಮೆಟೊ ಬೆಲೆ‌ ಕಡಿಮೆಯಾಗುತ್ತೆ ಅಂತ ಜನರು ಕಾಯ್ತಾ ಇದ್ರು. ಆದ್ರೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಟೊಮೆಟೊ ದರ ಏರಿದ್ದರಿಂದ ರೈತರು ಸಂತೋಷಗೊಂಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್​ನಲ್ಲಿ ಟೊಮೆಟೊಗೆ 140 ರೂಪಾಯಿ ಇದೆ.

ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಇರುವ ಹಿನ್ನೆಲೆ ಟೊಮೆಟೊ ಬೆಳೆ ನಾಶವಾಗಿದೆ. ಹೀಗಾಗಿ ಉತ್ತರ ಭಾರತದಿಂದ ಭಾರಿ ಬೇಡಿಕೆ ಇದೆ.‌ ಇದರ ಜೊತೆಗೆ ನಮ್ಮ ರಾಜ್ಯದಲ್ಲಿಯು ಮಳೆಯ ಆರ್ಭಟ ಜೋರಾಗಿದ್ದು ಟೊಮೆಟೊಗೆ ಎಲೆ ಕಾಯಿಲೆ ಸಹ ಬರ್ತಿದ್ಯಂತೆ. ಹೀಗಾಗಿ ಇದ್ದಂತಹ ಟೊಮೆಟೊ ಸ್ಟಾಕ್ ಕೂಡ ಖಾಲಿಯಾಗಿದ್ದು, ಇರುವ ಅಲ್ಪ ಟೊಮೆಟೊಗೆ ಹೆಚ್ಚಿನ ಹಣ ನಿಗದಿ ಮಾಡಿ ವ್ಯಾಪರಸ್ಥರು ವ್ಯಾಪಾರ ಮಾಡ್ತಿದ್ದಾರೆ

ನಮ್ಮ ಬೆಂಗಳೂರಿಗೆ ಕೋಲಾರ, ಚಿಕ್ಕಬಳ್ಳಾಪುರ,‌ ಮೈಸೂರು, ನಾಸಿಕ್, ಆಂಧ್ರ ಟೊಮೆಟೊ ಬರ್ತಿತ್ತು. ಇದೀಗಾ ಅಲ್ಲಿಂದ‌ ಬರುವುದು ಸಹ ಕಡಿಮೆಯಾಗಿದೆ.‌ ಅಲ್ಲದೇ 2 ವಾರ ನಿರಂತರವಾಗಿ ಮಳೆ ಬಂದ ಹಿನ್ನಲೆ ಟೊಮೆಟೊಗೆ ಎಲೆಕಾಯಿಲೆ ಬರ್ತಿದೆ. ಮುಂದಿನ ದಿನಗಳಲ್ಲಿ ಟೋಮಾಟೋ ಬೆಲೆ‌ 200 ರೂ ರ ಗಡಿದಾಟಿದ್ರು ದಾಟಬಹುದು ಅಂತ ವ್ಯಾಪಾರಸ್ಥರು ಹೇಳ್ತಿದ್ದಾರೆ.‌

Related