ಆರಾಧಿಸಲ್ಪಟ್ಟಿವ ವಾಲ್ಮೀಕಿ ರಾಮಾಯಣ

ಆರಾಧಿಸಲ್ಪಟ್ಟಿವ ವಾಲ್ಮೀಕಿ ರಾಮಾಯಣ

ಗಜೇಂದ್ರಗಡ : ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಶಿಕ್ಷಕ ರಮೇಶ ಕುಷ್ಟಗಿ ಹೇಳಿದರು.

ಗಜೇಂದ್ರಗಡದ ಎಸ್.ಜೆ.ವ್ಹಿ.ವ್ಹಿ.ಎಸ್ ಸಂಘದ ಶಾಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಇಂದಿಗೂ ಉಳಿಸಿ ವಿಶ್ವಕ್ಕೆ ಮಾನವೀಯ ಮೌಲ್ಯಗಳ ಸಾರಿದ ಮಹಾನ್ ಚೇತನರೆಂದರೆ ವಾಲ್ಮೀಕಿ ಮಹರ್ಷಿಗಳು ಅದೇ ರೀತಿ ಸರ್ಕಾರವು ಮಹರ್ಷಿ ವಾಲ್ಮೀಕಿಯ ವಿಚಾರ ಧಾರೆಗಳು ಜನ ಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಪುಸ್ತಕಗಳ ಮೂಲಕ ತಲುಪಿಸುವ ಕೆಲಸ ಮಾಡಿ, ಆ ಮೂಲಕ ಮಹರ್ಷಿ ವಾಲ್ಮೀಕಿ ವಿಶ್ವಮಾನವ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಬೇಕೆಂದು ಎಂದರು.

ಈ ಸಂದರ್ಭದಲ್ಲಿ ಸುಮಾ ಲಕ್ಕುಂಡಿ, ರಾಘವೇಂದ್ರ ಕೆ. ಮಾರುತಿ ನಂದ್ಯಾಳ, ಕೆ.ಎಮ್. ಗಾಣಗೇರ, ಬಸವರಾಜ ಗುಳಗುಳಿ, ಶಿವು ಚಲವಾದಿ, ಎಚ್. ಎಚ್. ಕಂಠಿ, ಎಮ್. ಅರ್. ಬಿನ್ನಾಳ, ಅನಿಲ ಮಹೇಂದ್ರಕರ, ಸೀತಲ ಓಲೇಕಾರ, ಎಸ್.ಕೆ. ಕೌಂಟಿಪಟೇಲ, ರೂಪಾ, ವಿಜಯಲಕ್ಷ್ಮಿ ದಿಂಡೂರ, ಸುಷ್ಮಾ ಚಿತ್ರಗಾರ, ಸುಧಾ ಎನ್. ಆರ್, ರೇಷ್ಮಾ ಬೇಲೆರಿ, ಆರ್. ಎಸ್. ಕುಷ್ಟಗಿ, ವೇದಾ ಶ್ರೀಮಠ, ಜಿ. ಎಮ್. ವಾಲಿ ಸೇರಿದಂತೆ ಇತರೆ ಇದ್ದರು.

Related