ಆಸ್ಪತ್ರೆ ಸಿಬ್ಬಂದಿಗಳನ್ನು ಬೆಚ್ಚಿ ಬಿಡಿಸಿದ ಮಹಿಳೆ..!

ಆಸ್ಪತ್ರೆ ಸಿಬ್ಬಂದಿಗಳನ್ನು ಬೆಚ್ಚಿ ಬಿಡಿಸಿದ ಮಹಿಳೆ..!

ತೆಲಂಗಾಣ: ಹೊಲದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ಹಾಗೂ ಕಚ್ಚಿದೆ. ಹಾವು ಕಚ್ಚಿದ ತಕ್ಷಣವೇ ಆ ಹಾವನ್ನು ಹೊಡೆದು ಸಾಯಿಸಿ ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಹೌದು, ಕೂಲಿ ಕೆಲಸಕ್ಕೆ ಎಂದು ಮಹಿಳೆಯೊರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಕಸ್ಮಾತಾಗಿ ಹಾವು ಕಚ್ಚಿದೆ. ಇದರಿಂದ ಎಚ್ಚೆತ್ತುಗೊಂಡ ಮಹಿಳೆ ತಕ್ಷಣ ಜೊತೆಯಲ್ಲಿರುವ ಕೆಲಸಗಾರರೊಂದಿಗೆ ಹಾವನ್ನು ಹುಡುಕಿ, ಕೊಂದುಹಾಕಿ ಮತ್ತೆ ಆಸ್ಪತ್ರೆಗೆ ಬಂದಿದ್ದಾರೆ.

ಇನ್ನು ಆಸ್ಪತ್ರೆಗೆ ಬರುವಾಗ ಸಾಯಿಸಿರುವ ಹಾವನ್ನು ಒಂದು ಬಾಟಲಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ ಇದರಿಂದ ಆಸ್ಪತ್ರೆ ಸಿಬ್ಬಂದಿಗಳು ಗಾಬರಿಯಾಗಿದ್ದಾರೆ.

ಮುಳುಗು ಜಿಲ್ಲೆಯ ವೆಂಕಟಾಪುರಂ ಮಂಡಲದ ಮುಕುನೂರುಪಾಲೆಂ ಗ್ರಾಮದ ಶಾಂತಾ ಎಂಬ ಮಹಿಳೆ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಗೆ ಹಾವು ಕಚ್ಚಿದೆ. ಅಲ್ಲಿಂದ ಕೂಡಲೇ ವೆಂಕಟಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದಾರೆ. ಆದರೆ ಹೊರಡುವಾಗ ಆಕೆಗೆ ಅನುಮಾನವೊಂದು ಹುಟ್ಟಿಕೊಂಡಿದೆ. ಆಸ್ಪತ್ರೆಗೆ ಹೋದರೆ ಯಾವ ಹಾವು ಕಚ್ಚಿದೆ ಎಂದು ವೈದ್ಯರು ಕೇಳಿದರೆ ಏನು ಮಾಡಲಿ ಎಂದು ತಿಳಿಯದೇ ಮಹಿಳೆ ಕೊಂದ ಹಾವನ್ನು ಡಬ್ಬಿಯೊಂದರಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದಾಳೆ.

ತಬ್ಬಿಬ್ಬಾದ ವೈದ್ಯಕೀಯ ಸಿಬ್ಬಂದಿ ಮಹಿಳೆಯ ಕೈಯಲ್ಲಿ ಸತ್ತ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಕ್ಷಣವೇ ವೈದ್ಯಕೀಯ ಸೇವೆ ಒದಗಿಸಲಾಗಿದೆ. ಸದ್ಯ ಶಾಂತಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Related