ಪ್ರಜ್ವಲ್ ಪ್ರಕರಣ; ಕಾಂಗ್ರೆಸ್ ಮಹಾನಾಯಕರ ಚರ್ಚೆಯಾಗಬೇಕು: ಹೆಚ್. ಡಿ.ಕೆ

ಪ್ರಜ್ವಲ್ ಪ್ರಕರಣ; ಕಾಂಗ್ರೆಸ್ ಮಹಾನಾಯಕರ ಚರ್ಚೆಯಾಗಬೇಕು: ಹೆಚ್. ಡಿ.ಕೆ

ಹುಬ್ಬಳ್ಳಿ: ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ರಾಜ್ಯದಲ್ಲಿ ಭಾರಿ ಚರ್ಚೆಯಾಗುತ್ತಿತ್ತು ಈ ಪ್ರಕರಣ ದಿನಕ್ಕೊಂದು ತಿರುವ ಪಡೆಯುತ್ತಿದೆ.

ಹೌದು, ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರ್ ಡ್ರೈವರ್ ಸ್ಪೋಟಕ ಮಾಹಿತಿಯನ್ನು ನೀಡಿದ್ದು ಪ್ರಜ್ವಲ್ ರೇವಣ್ಣ ಅವರ ಫೋಟೋಗಳನ್ನು ಬಿಜೆಪಿಯ ಮುಖಂಡ ದೇವರಾಜ್ ಅವರಿಗೆ ನೀಡಿದ್ದೆ ಎಂಬ ಮಾಹಿತಿಯನ್ನು ಹೊರ ಹಾಕಿದ್ದರು.

ಇನ್ನು ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಕೂಡ ದೇವರಾಜ್ ಅವರು ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿ, ನಮ್ಮ ಕುಟುಂಬದ ಮಾನ ಮರ್ಯಾದೆ ಹಾಳು ಮಾಡಿದವರೇ ಡಿಕೆ ಶಿವಕುಮಾರ್ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಡಿಕೆ ಶಿವಕುಮಾರ್ ಅವರನ್ನು ದೂರಿದರು. ಪ್ರಜ್ವಲ್ ರೇವಣ್ಣನಿಂದ ತಪ್ಪಾಗಿದ್ದರೆ ಶಿಕ್ಷೆ ಆಗೇ ಆಗುತ್ತದೆ ಅದರಲ್ಲಿ ಸಂಶಯವೇ ಬೇಡ, ಪ್ರಜ್ವಲ್ ತನ್ನ ಸಹೋದರ ರೇವಣ್ಣನ ಮಗ ಅಂತ ತಾನು ಪರವಹಿಸಿಕೊಂಡು ಮಾತಾಡಲ್ಲ, ಅದರೆ ಇದರ ಹಿಂದಿನ ಮತ್ತು ಮುಂದಿನ ರಾಜಕಾರಣ ಇದೆಯಲ್ಲ ಅದರ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಸಂಬಂಧಿಸಿದಂತೆ ಹಲವಾರು ಮಹಾನ್ ನಾಯಕರುಗಳ ಕೈವಾಡವಿದೆ ನಾನು ಪ್ರಸ್ತುತ ಪಡಿಸುತ್ತೇನೆ ಎಂದು ಹೇಳುತ್ತಾರೆ. ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ಗೆ ಶಿಕ್ಷೆ ಆಗಲೇಬೇಕು. ಕಾಂಗ್ರೆಸ್ನ ಮಹಾನ್ ನಾಯಕರು ರಾಜ್ಯದಲ್ಲಿರುವ ಮಹಿಳೆಯರಿಗೆ ಯಾವ ರೀತಿ ರಕ್ಷಣೆ ಕೊಟ್ಟಿದ್ದಾರೆ, ಅಥವಾ ಬೀದಿಗೆ ತಂದಿದ್ದಾರೆ ಎಂಬುದನ್ನು ನಾವು ಚರ್ಚೆ ಮಾಡಬೇಕು.

ಈ ಪ್ರಕರಣದಲ್ಲಿ ಯಾವ ರೀತಿ ಪೆನ್ಡ್ರೈವ್ ಹಂಚಿಕೆ ಆಯಿತು, ಇದರ ಹಿಂದೆ ಯಾರಿದ್ದಾರೆ ಎಂಬ ತನಿಖೆಯನ್ನು ನಾವು ಮಾಡಿಸುತ್ತೇವೆ. ಯಾವ ಕಾರಣಕ್ಕೋಸ್ಕರ ಯಾವ ಉದ್ದೇಶಕ್ಕೋಸ್ಕರ ಪೆನ್ ಡ್ರೈವ್ಗಳನ್ನು ಹಂಚಿದ್ದಾರೆ.

ರಾಜ್ಯದ ಡಿಸಿಎಂ ಸಿಡಿ ಪೆನ್ ಡ್ರೈವ್ ಮಾಡಿಸುವುದರಲ್ಲಿ ನಿಷ್ಣಾತರು, ಈ ಪ್ರಕರಣದಲ್ಲಿ ಅವರ ಪಾತ್ರವೇನು ಅನ್ನೋದು ದೃಢಪಡಬೇಕು, ಮಹಿಳೆಯರಿಂದ ಪ್ರತಿಭಟನೆ ಮಾಡಿಸುತ್ತಿದ್ದಾರಲ್ಲ ಅದೆಲ್ಲದರ ಬಗ್ಗೆ ಚರ್ಚೆಯಾಗಬೇಕು ಎಂದು ಕುಮಾರಸ್ವಾಮಿ ಹೇಳುತ್ತಾರೆ. ಆದರೆ ಮಹಿಳೆಯರ ಬದುಕನ್ನ ಬೀದಿಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಮಾಡುವ ಆರೋಪ ಅರ್ಥವಾಗುವುದಿಲ್ಲ.

Related