30 ಕುಸ್ತಿಪಟುಗಳ ಜಿದ್ದಾಜಿದ್ದಿ

30 ಕುಸ್ತಿಪಟುಗಳ ಜಿದ್ದಾಜಿದ್ದಿ

ಬೆಂಗಳೂರು: ರಥಸಪ್ತಮಿಯ ಅಂಗವಾಗಿ ಇಂದು ಆಡುಗೋಡೆ ಗ್ರಾಮದಲ್ಲಿ ಕುಸ್ತಿ ಪಂದ್ಯಗಳನ್ನು ಏರ್ಪಡಿಸಲಾಗಿದ್ದು, ಈ ಪಂದ್ಯಾವಳಿಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾಗಿರು ರಾಮಲಿಂಗ ರೆಡ್ಡಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಇನ್ನು ಸಚಿವ ರಾಮಲಿಂಗ ರೆಡ್ಡಿ ಅವರ ತಂದೆ ದಿವಂಗತ ವೆಂಕಯ್ಯ ರೆಡ್ಡಿ ಅವರ ಸ್ಮರಣೆಗಾಗಿ ಸತತ 66 ವರ್ಷಗಳಿಂದ ನಡೆಯುತ್ತಿರುವ ಈ ಕುಸ್ತಿ ಪಂದ್ಯಾವಳಿಗಳು ಇದಾಗಿದ್ದು, ಇಂದು (ಫೆ. 16 ಶುಕ್ರವಾರ) ಸಂಜೆ 5:00ಗೆ ಸಾರಿಗೆ ಸಚಿವರಾಗಿರುವ ರಾಮಲಿಂಗ ರೆಡ್ಡಿ ಅವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳೆ ಹಾಗೂ ಪುರುಷ ಕ್ರೀಡಾಪಟುಗಳು ಈ ಪಂದ್ಯಾವಳಿ ಭಾಗವಹಿಸಿದ್ದಾರೆ.

ಇನ್ನು ಈ ಕುಸ್ತಿ ಪಂದ್ಯಾವಳಿಗಳಲ್ಲಿ ಸರಿಸುಮಾರು 30 ಜೋಡಿಗಳು ಜಿದ್ದಾಜಿದ್ದಿ ನಡೆಸಲಿದ್ದು, ಕುಸ್ತಿಯಲ್ಲಿ ಗೆದ್ದವರಿಗೆ ಆಕರ್ಷಿಕ ಬಹುಮಾನವನ್ನು ನೀಡಲಾಗುತ್ತದೆ ಎಂದು ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಪಾಲಿಗೆ ಸದಸ್ಯರಾದ ಬಿ ಮೋಹನ್, ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಹಾಗೂ ಆಡುಗೋಡೆ ಹೇಮಂತ್  ಕುಮಾರ್‌ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Related