ಆರನೇ ವೇತನ ಪರಿಷ್ಕರಣೆ ಅಸಾಧ್ಯ

ಆರನೇ ವೇತನ ಪರಿಷ್ಕರಣೆ ಅಸಾಧ್ಯ

ಹುಮನಾಬಾದ್  : ವೇತನ ಪರಿಷ್ಕರಣೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದ್ದು, 6ನೇ ವೇತನ ಪರಿಷ್ಕರಣೆ ಅಸಾಧ್ಯ ಎಂದು ರಾಜ್ಯದ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಬಸವಕಲ್ಯಾಣ ಉಪಚುನಾವಣೆ ನಿಮಿತ್ತ ಆಗಮಿಸಿದ ಅವರು ಹುಮನಾಬಾದ್ ಸಮೀಪದ ಖಾಸಗಿ ಮಾಣಿಕನಗರದ ಸಿದ್ದರಾಜ ಮಾಣಿಕಪ್ರಭು ಗೆಸ್ಟ್ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

6ನೇ ವೇತನ ನೀಡಿದಲ್ಲಿ ಸೀನಿಯರ್ ಮತ್ತು ಜೂನಿಯರಗಳಿಗೆ ಲಾಭವಾಗುವದರಿಂದ ಮಧ್ಯ ತಾರತಮ್ಯ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಆದರಿಂದ ಅವರಿಗೆ ದೂರ ಪ್ರಯಾಣ ಮಾಡುವ ಬಸ್ ಸೇವೆ ಮಾಡುವ ಹಾಗೂ ಓಟಿ ಮಾಡಿದಲ್ಲಿಯು, ಇನ್‌ಸೆಂಟಿವ್ (2ಪ್ರತಿಶತ) ರೂಪದಲ್ಲಿ ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರಿಗೂ ಕಮಿಷನ್ ನೀಡುತ್ತೆವೆ.

ಆಸೆ ಇರಬೇಕು ಆದರೆ ಬಂದರೆ ಬರಲಿ ಅನ್ನೋರಿದ್ದಾರೆ, ಆದರೆ ಮೇ 4ರ ವರೆಗೆ ಕೆಲಸ ಮಾಡಿ ಕರೆದು ಸಂಬಳದ ಬಗ್ಗೆ ಮಾತನಾಡಿ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದ್ದೇವೆ. ಆದರೂ ಮುಷ್ಕರ ಬಹಿಷ್ಕಾರ ಮಾಡುತ್ತಿರುವುದು ತಪ್ಪು. ಅವರ ವೇತನ ಪರಿಷ್ಕರಣೆಗೆ ನಾವು ಸಿದ್ಧರಿದ್ದೇವೆ. ಈಗಾಗಲೇ ಕೊರೋನಾ ಕಾರಣದಿಂದ ಮುಷ್ಕರ ಮಾಡದಂತೆ ಆದೇಶವಿದ್ದರು, ಪ್ರೂಬೇಷನರಿ(ಟ್ರೇನಿಗಳು)2 ವರ್ಷದವರೆಗೆ ಸಂಸ್ಥೆಯ ವಿರುದ್ಧ ಯಾವುದೇ ಮುಷ್ಕರ, ಪ್ರತಿಭಟನೆ, ಸಂಸ್ಥೆಯ ವಿರುದ್ಧ ಮಾಡಬಾರದೆಂದು ಆದೇಶವಿದ್ದರು ಭಾಗವಹಿಸುತ್ತಿರುವುದು ತಪ್ಪು.

ಲೆಬರ್ ಕೋರ್ಟ್ನಲ್ಲಿ ಮುಷ್ಕರ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ ಅವರ ವಿರುದ್ಧ ನಿರ್ಣಯ ಆದೇಶವಾಗಿದೆ. ಪ್ರತಿಭಟನೆ ಮಾಡಕೂಡದು ಆದರಿಂದ ನ್ಯಾಯಾಲಯ ನೀಡಿದ ಆದೇಶಕ್ಕಾದರು ಗೌರವ ಕೊಡಬೇಕು. ಸಂಕಷ್ಟ ಇರುವ ಈ ಸಂದರ್ಭದಲ್ಲಿ ಎಲ್ಲರೂ ಕೋವಿಡ್ ಇರುವುದರಿಂದ ಕೈಜೋಡಿಸಿ ಸಂಸ್ಥೆ ಮುನ್ನಡೆಸಬೇಕು ಎಂದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿಯವರಿಗೆ ಸಹಕಾರ ಕೇಳಿದ್ದೆವೆ ಅದಕ್ಕೆ 8 ಸಾವಿರಕಿಂತ ಹೆಚ್ಚು ವಾಹನಗಳನ್ನು ಓಡಾಡುತ್ತಿವೆ. 1626 ಬಸ್‌ಗಳು ಈಗಾಗಲೇ ಒಡಾಟ ಪ್ರಾರಂಭಿಸಲಾಗಿದ್ದು, ಸೋಮವಾರ ಬೆಳಗ್ಗೆ ವರೆಗೆ 3 ಸಾವಿರ ಮೇಲ್ಪಟ್ಟು ಬಸ್ ಪ್ರಾರಂಭಿಸಲಾಗುವುದು ಎಂದರು.

 

Related