ದೇಶದ ಗಡಿ ಕಾಯುವುದು ಹೆಮ್ಮೆಯ ಕಾಯಕ

ದೇಶದ ಗಡಿ ಕಾಯುವುದು ಹೆಮ್ಮೆಯ ಕಾಯಕ

ಬಳ್ಳಾರಿ : ದೇಶದ ಮಣ್ಣಿನಲ್ಲಿ ಹುಟ್ಟುವುದೇ ಪುಣ್ಯ, ಅದರಲ್ಲಿಯೂ ಭಾರತ ಮಾತೆಯ ಸೇವೆ ಮಾಡುವುದೇ ಒಂದು ಭಾಗ್ಯ. ಆ ನಿಟ್ಟಿನಲ್ಲಿ ದೇಶದ ಗಡಿ ಕಾಯುವ ಸೈನಿಕರು ನಿಜವಾಗಿಯೂ ನಮ್ಮೆಲ್ಲರಿಗೂ ಹೆಮ್ಮ ಎಂದು ಹಿರಿಯ ಬಯಲಾಟ ಕಲಾವಿದೆ, ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತೆ ಚಾಮುಂಡೇಶ್ವರಿ ಹೇಳಿದರು.

ಅವರು ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಬಳ್ಳಾರಿ ಗುಗ್ಗರಹಟ್ಟಿಯಲ್ಲಿ ಆಯೋಜಿಸಿದ್ದ “ಗಣರಾಜ್ಯೋತ್ಸವ ಸಾಂಸ್ಕೃತಿಕ ಸೌರಭ” ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ಸೇನೆಯಲ್ಲಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗುಗ್ಗರಹಟ್ಟಿಯ ಜಿ.ನಾಗರಾಜ್ ಅವರನ್ನು ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಸನ್ಮಾನಿಸಲಾಯಿತು.  ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರುಸ್ವಾಮಿ ಮಾತನಾಡಿದರು.

ನಿವೃತ್ತ ಹಿಂದಿ ಶಿಕ್ಷಕಿ ಸರೋಜಾ ಬ್ಯಾತನಾಳ್, ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದರಾದ ಅಮರೇಶಯ್ಯಸ್ವಾಮಿ, ಬಳ್ಳಾರಿ, ಶಿಕ್ಷಕರಾದ ಅಮಾತಿ ಬಸವರಾಜ್, ಛಾಯಾಗ್ರಾಹಕ ಶಿವರಾಜಗೌಡ, ತೊಗಲುಗೊಂಬೆ ಕಲಾವಿದರ ಪ್ರಭು, ಬಸವರಾಜ್ ಆಚಾರಿ, ಪುರುಷೋತ್ತಮ, ಶ್ರೀಕಾಂತ್, ಮಾಜಿ ಸೈನಿಕರ ಕುಟುಂಬದ ಎಲ್ಲಾ ಸದಸ್ಯರು  ಇದ್ದರು.

Related