ಮಾವಿನ ನಾಡಿನ್ನು ಶ್ರೀಗಂಧದ ಬೀಡು

ಮಾವಿನ ನಾಡಿನ್ನು ಶ್ರೀಗಂಧದ ಬೀಡು

ಕೋಲಾರ: ಜಿಲ್ಲೆ ಹಲವಾರು ವರ್ಷಗಳಿಂದ ವಿಶ್ವಪ್ರಸಿದ್ದ ಮಾವು-ರೇಷ್ಮೆ-ಟಮೋಟ-ಹಾಲು ಮುಂತಾದವುಗಳಿಗೆ ಹೆಸರುವಾಸಿಯಾಗಿರುವ ಕ್ಷೇತ್ರವಾಗಿದೆ. ಇಲ್ಲಿ ಬೆಳೆದಿರುವ ಬೆಳೆಗಳು ಮತ್ತು ಉತ್ಪನ್ನಗಳನ್ನು ಹೊರ ರಾಜ್ಯ-ದೇಶ ಹಾಗೂ ವಿದೇಶಗಳಿಗೆ ರಪ್ತು ಮಾಡುವ ಮೂಲಕ ಜಿಲ್ಲೆಯ ರೈತರು ಮಾದರಿಯಾಗಿದ್ದಾರೆ.

ಬಯಲು ಸೀಮೆ ಪ್ರದೇಶವಾಗಿರುವ ಕೋಲಾರ ಜಿಲ್ಲೆ ನೀರಿನ ಬವಣೆಯನ್ನು ಅನುಭವಿಸುತ್ತಿದೆ ಹೀಗಿದ್ದರೂ ಇಲ್ಲಿನ ರೈತರು ಮಳೆಯಾಶ್ರೀತ ಬೆಳೆಗಳನ್ನು ಬೆಳೆಯುತ್ತಿದ್ದು, ಬೇರೆ ಜಿಲ್ಲೆಗಳ ರೈತರಂತ ಕೈಸುಟ್ಟ ಬೆಳೆಗಳಿಂದ ಆತ್ಮಹತ್ಯಗಳಿಗೆ ಪ್ರಯತ್ನಿಸದಿರುವುದು ನಿಜಕ್ಕೂ ಶ್ಲಾಘನೀಯ.
ಜಿಲ್ಲೆಯ ರೈತರು ಯತೇಚ್ಚವಾಗಿ ಬರಡು ನೆಲಗಳಲ್ಲಿ ಹಾಗೂ ಬೆಳೆ ಬೆಳೆಯಲಾಗದ ಭೂಮಿಗಳಲ್ಲಿ ನೀಲಗಿರಿಗೆ ಮಾರು ಹೋಗಿದ್ದರು, ಬಯಲುಸೀಮೆ ಪ್ರದೇಶಗಳಲ್ಲಿ ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ನೀಲಗಿರಿ ತೆರವುಗೊಳಿಸಿ ರ‍್ಯಾಯವಾಗಿ ಬೇರೆ ಉಪಯುಕ್ತ ಬೆಳೆಗಳನ್ನು ಬೆಳೆಯುವ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಗಳನ್ನು ಸರ್ಕಾರ ಹಮ್ಮಿಕೊಂಡಿದ್ದರ ಫಲವಾಗಿ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಅರಣ್ಯಾಧಿಕಾರಿಗಳ ಸಾಧನೆ ಇಂದು ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗಿ ಪರಿಶ್ರಮಿಸಿದ್ದಾರೆ.

ಕೋಟಿಗಟ್ಟಲೆ ಆದಾಯ ನಿರೀಕ್ಷೆ
ದೇಸಿ ಹಾಗೂ ಜಾಗತೀಕ ಮಾರುಕಟ್ಟೆಯಲ್ಲಿ ಶ್ರೀಗಂಧ, ರೆಡ್ ಸ್ಯಾಂಡಲ್, ಬೀಟೆ, ಹೊನ್ನೆಗೆ ಹೆಚ್ಚಿನ ಬೇಡಿಕೆ ಇದ್ದು, ಗಂಧಕ ಮರಗಳು ಪರಿಸರಕ್ಕೆ ಪೂರಕವಾಗಿರುವುದಲ್ಲದೆ ತುಂಬಾ ಲಾಭದಾಯಕವಾಗಿದೆ. ಸುಧೀರ್ಘ ಕಾಲ ತೆಗೆದುಕೊಂಡರೂ ಅತಿ ಹೆಚ್ಚು ಲಾಭ ತರುವ ಕಡಿಮೆ ಖರ್ಚಿನ ಬೆಳೆ ಇದಾಗಿದೆ.
 

Related