ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ

ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಮಹತ್ವ

ಕೋಲಾರ: ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಶಿಕ್ಷಕರು ಘನತೆ ಗೌರವವನ್ನು ಉಳಿಸಿಕೊಂಡರೆ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.
ರೋಟರಿ ಕೋಲಾರ ಹಾಗೂ ರೋಟರಿ ಕೋಲಾರ ಟ್ರಸ್ಟ್ ವತಿಯಿಂದ ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಹಿರಿಯ ರೊಟೇರಿಯನ್‌ಗಳಿಗೆ ಸನ್ಮಾನಿಸಿ ಮಾತನಾಡಿದರು.
ಪುರಾಣ ಪುಣ್ಯ ಕಾಲದಿಂದಲೂ ಗುರುವಿಗೆ ಶ್ರೇಷ್ಠ ಸ್ಥಾನ ಉಳಿಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಭಾರತದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಪುಲೆ ಅವರ ಮೊದಲ ಶಿಕ್ಷಣದ ಪಂಕ್ತಿ ಎಂದು ದೇಶದೆಲ್ಲೆಡೆ ನಂದಾದೀಪವಾಗಿ ಬೆಳಗುವಂತಾಗಿದೆ. ಸಮಾಜವನ್ನು ಶಿಕ್ಷಣದ ಮೂಲಕ ತಿದ್ದುವ ಶಕ್ತಿ ಇರುವುದು ಕೇವಲ ಶಿಕ್ಷಕರಿಗೆ ಮಾತ್ರ. ಯಾರು ಕಾಯಾವಾಚಮನಸ್ಸಾ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾರೋ ಅವರಿಗೆ ಗೌರವಾಧರಗಳು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಜನಾಭಿಪ್ರಾಯದಂತೆ ಆಯ್ಕೆ ಮಾಡಲಾದ ಸರ್ಕಾರಿ ಶಾಲಾಕಾಲೇಜುಗಳ ಶಿಕ್ಷಕ-ಶಿಕ್ಷಕಿಯರು ಮತ್ತು ರೋಟರಿ ಸಂಸ್ಥೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ರೋಟೇರಿಯನ್‌ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

 

Related