ಅಂಗನವಾಡಿ ಆಹಾರ ಅಕ್ರಮ ಮಾರಾಟ

ಅಂಗನವಾಡಿ ಆಹಾರ ಅಕ್ರಮ ಮಾರಾಟ

ಹಗರಿಬೊಮ್ಮನಹಳ್ಳಿ : ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿತರಿಸುತ್ತಿರುವ ಆಹಾರ ಕಳಪೆಯಿಂದ ಕೂಡಿದ್ದು ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬಂದ ಆಹಾರವನ್ನು ಸರಿಯಾಗಿ ವಿತರಣೆ ಮಾಡದೆ ತಮ್ಮ ಮನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅರ್ಧಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಆರೋಪಿಸಿದರು.

ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಅಂಗನವಾಡಿ ಆಹಾರದ ವಿಷಯವಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೂಡಲೇ ತನಿಖೆ ನಡೆಸಬೇಕು ಎಂದು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Related