ಗುರುಕುಲ ಮಾದರಿ ವಿದ್ಯಾಗಮ

ಗುರುಕುಲ ಮಾದರಿ ವಿದ್ಯಾಗಮ

ಗಜೇಂದ್ರಗಡ :  ಕೋವಿಡ್ ಕಾಲದಲ್ಲಿ ಎಲ್ಲ  ಸ್ತರದ  ವಿದ್ಯಾರ್ಥಿಗಳನ್ನು ಪಾಠದತ್ತ ಸೆಳೆಯಲು ಜಾರಿಗೆ ತಂದಿರುವ ‘ವಿದ್ಯಾಗಮʼ ಯೋಜನೆಯು ಗುರುಕುಲ ಮಾದರಿ ಶಾಲೆಗಳನ್ನು ನೆನಪಿಸುತ್ತದೆ. ನಮ್ಮ ಸಂಸ್ಕೃತಿಯ ಪುನರುತ್ಥಾನವಾದಂತಾಗಿದೆ ಎಂದು ದಿಂಡೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಮ್.ಎಸ್ ತೋಟದ ಹೇಳಿದರು.

ಪಟ್ಟಣದ ಸಮೀಪದ ದಿಂಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಗಮ ಹಿನ್ನಲೆ ಮಕ್ಕಳನ್ನು ಸ್ವಾಗತಿಸಿ ಧರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಕೋವಿಡ್ ಪ್ರಸರಣದ ಹೆಚ್ಚು ದಿನ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ  ಉದ್ದೇಶದಿಂದ ಎಲ್ಲ ಮಕ್ಕಳಿಗೂ ತಂತ್ರಜ್ಞಾನಾಧಾರಿತ ಶಿಕ್ಷಣ ದೊರೆಯುವಂತೆ ಮಾಡಿದರು.

ಶಿಕ್ಷಕರು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವುದು ವಿದ್ಯಾಗಮ ಯೋಜನೆಯ ಉದ್ದೇಶವಾಗಿದೆ. ಈ ಹಿನ್ನಲೆ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸ್ಯಾನಿಟೈಸರ್ ಮಾಡಿ, ಬರಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

Related