ರಾಜ್ಯದಲ್ಲಿ ಖಾಸಗಿ ಸಾರಿಗೆ ಇಲಾಖೆ ಭವಿಷ್ಯ ಇಂದು ನಿರ್ಧಾರ!

ರಾಜ್ಯದಲ್ಲಿ ಖಾಸಗಿ ಸಾರಿಗೆ ಇಲಾಖೆ ಭವಿಷ್ಯ ಇಂದು ನಿರ್ಧಾರ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ 2023ನೇ ಸಾಲಿನ ವಿಧಾನಸಭಾ ಚುನಾವಣೆಗೂ ಮುನ್ನ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶಕ್ತಿ ಯೋಜನೆಯಿಂದಾಗಿ ರಾಜ್ಯದಲ್ಲಿ ಖಾಸಗಿ ಬಸ್ ಚಾಲಕರಿಗೆ ಎಲ್ಲಿಲ್ಲದ ನಷ್ಟವಾಗಿದೆ ಎಂದು ಪ್ರತಿಭಟನೆ ಮುಂದಾಗಿದ್ದರು.

ಹೌದು, ಕರ್ನಾಟಕ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ಜುಲೈ 27ರಂದು ಬಂದ್‌ಗೆ ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಅಲರ್ಟ್ ಆಗಿ ಜುಲೈ 24ರಂದು ಒಂದೇ ದಿನ 2 ಸುತ್ತಿನ ಸಭೆ ನಡೆಸಿ ಕೆಲವು ಬೇಡಿಕೆಗಳನ್ನು ಶೀಘ್ರದಲ್ಲೇ ಈಡೇರಿಸುವ ಭರವಸೆ ನೀಡಿದ್ದರು.

ಸಾರಿಗೆ ಸಚಿವರ ಭರವಸೆಯ ಮೇರೆಗೆ ಖಾಸಗಿ ಸಾರಿಗೆ ಸಂಘಟನೆಗಳು ಮುಷ್ಕರ ವಾಪಸ್ ಪಡೆದಿದ್ರು. ಜೊತೆಗೆ ಇಂದು ಇನ್ನೊಂದು ಸುತ್ತಿನ ಸಭೆ ನಡೆಸೋದಾಗಿ ಹೇಳಿದ್ರು. ಅಲ್ಲದೇ ಆಗಸ್ಟ್ ಮೊದಲನೇ ವಾರದಲ್ಲಿ ಸಿಎಂ ಜೊತೆ ಭೇಟಿ ಮಾಡಿಸೋದಾಗಿಯೂ ಭರವಸೆ ನೀಡಿದ್ರು. ಇಂದಿನ ಸಭೆಯಲ್ಲಿ ಸಾರಿಗೆ ಸಚಿವರು ಎಲ್ಲ ಸಂಘಟನೆಗಳನ್ನ ಬೇರೆ ಬೇರೆಯಾಗಿ ಕರೆದು ಮಾತುಕತೆ ನಡೆಸಲಿದ್ದಾರೆ. ಒಂದು ಸಂಘಟನೆಯಿಂದ ಇಬ್ಬರಿಗೆ ಮಾತ್ರ ಸಭೆಗೆ ಅವಕಾಶ ನೀಡಲಾಗಿದೆ.

Related