ಬೆಂಗಳೂರು: ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರವರು ಏರೋ ಇಂಡಿಯಾ 2025 ರಲ್ಲಿ HTT-40 ವಿಮಾನದ ಹಾರಾಟ ನಡೆಸಿದ್ದಾರೆ.
ಇಂದು (ಗುರುವಾರ ಫೆ. 13) ರಂದು ಏರೋ ಇಂಡಿಯಾ 2025 ಗೆ ಭೇಟಿ ನೀಡಿರುವ ಸಂಸದ ತೇಜಸ್ವೀ ಸೂರ್ಯ ರವರು ಭಾರತದ ಸ್ಥಳೀಯ ಮೂಲ ತರಬೇತಿ ವಿಮಾನವಾದ HTT-40 ನಲ್ಲಿ ಹಾರಾಟ ನಡೆಸಿದ್ದಾರೆ. ಸಂಸದರ ಹಾರಾಟ ಸಮಯ ಬೆಳಿಗ್ಗೆ 8:00 ಗಂಟೆಗೆ ಪ್ರಾರಂಭವಾಗಿ 8:30 ಕ್ಕೆ ಮುಕ್ತಾಯಗೊಳ್ಳಲಿದೆ. ವಿಮಾನದ ಹಾರಾಟದ ನಂತರ ಸಂಸದರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು; ನಾಗರೀಕರಿಂದ ಬರುವ ಸಲಹೆಗಳನ್ನು ಸೇರಿಸಿ ಅಂತಿಮಗೊಳಿಸಲಾಗುವುದು
