ಅಧಿಕಾರಿಗಳದ್ದು ಜಾಣ ಕುರುಡು ವರ್ತನೆ

ಅಧಿಕಾರಿಗಳದ್ದು ಜಾಣ ಕುರುಡು ವರ್ತನೆ

ಗಜೇಂದ್ರಗಡ: ಪಟ್ಟಣಕ್ಕೆ ಹೊಂದುಕೊಂಡ ಬಸ್ ಡಿಪೋ ಅಲ್ಲಿನ ಖಾಸಗಿ ಕಟ್ಟಡದಲ್ಲಿ ಗಜೇಂದ್ರಗಡ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿತು.

ಗಜೇಂದ್ರಗಡದಲ್ಲಿರುವಂತಹ ಸಮಸ್ಯೆಗಳನ್ನು ಕುರಿತು ಅಧಿಕಾರಿಗಳೊಂದಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಪಾಟೀಲ್, ಉಪಾಧ್ಯಕ್ಷ ಶಶಿಧರ್ ಹೂಗಾರ್, ಸ್ಥಾಯಿ ಸಮಿತಿಯ ಅಧ್ಯಕ್ಷರು ಹಾಗೂ ತಾಂ.ಪಂ ಸದಸ್ಯೆರು ಚರ್ಚೆ ನಡೆಸಿದರು. ಬಳಿಕ ಉಪಾಧ್ಯಕ್ಷ ಶಶಿಧರ ಹೂಗಾರ ಕೆಲ ಇಲಾಖೆಯ ಅಧಿಕಾರಿಗಳು ಜಾಣ ಕುರುಡು ವರ್ತನೆಯನ್ನು ಪ್ರದರ್ಶನ ತೋರುತ್ತಿದ್ದಾರೆ. ವಿದ್ಯುತ್ ಇಲಾಖೆಯಲ್ಲಿನ ಕೆಲ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು. ಹೆಸ್ಕಾಂ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಹಿಡಿತ ಇರಲಿ ಎಂದು ಕಿವಿ ಮಾತು ಹೇಳಿದರು.

ಈಗ ಮಳೆಗಾಲ ಮಳೆ ಬರುವ ಸಮಯ ಇದೇ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಜಮೀನುಗಳಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರವನ್ನು ರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಕೇವಲ ಸಸಿನೆಟ್ಟು ಅದಕ್ಕೆ ಮುಳ್ಳು ಕಂಟಿ ಹಾಕಿ ಸುಮ್ಮನೆ ಕೂತರೆ ಪ್ರಯೋಜನವಿಲ್ಲ ಬದಲಾಗಿ ಅವುಗಳನ್ನು ಜೋಪಾನ ಮಾಡಲು ಕಾವಲುಗಾರರನ್ನು ನೇಮಿಸಬೇಕು. ನೇಮಿಸಿದ ಕಾವಲುಗಾರರು ಸರಿಯಾಗಿ ಆ ಗಿಡಗಳಿಗೆ  ಕಾವಲು ನೀಡುತ್ತಿದ್ದಾರೆ ಎಂದು ಆಗಾಗ ನೋಡಬೇಕು. ಆದರೆ ನಮ್ಮ ಭಾಗದಲ್ಲಿ ಯಾವುದೇ ರೀತಿಯ ಸಸಿಗಳನ್ನು ಜೋಪಾನ ಮಾಡುಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶಶಿಧರ್ ಹೂಗಾರ್ ಆರೋಪ ಮಾಡಿದರು.

ಸಭೆಗೆ ಕೆಲ ಅಧಿಕಾರಿಗಳು ಗೈರು
ನೂತನ ತಾಂ.ಪಂ ಸಾಮಾನ್ಯ ಸಭೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು, ಉಪನೊಂದಣಾಧಿಕಾರಿಗಳು, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ಕೆಲ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು ಅಂತಹವರ ವಿರುದ್ಧ ಠರಾವೂ ಪಾಸ ಮಾಡಿ ಸೂಕ್ತ ಕ್ರಮ ಕೈಗೊಳ್ಳಲುವಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಾಂ.ಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

Related