ಮಸ್ಕಿಯಲ್ಲಿ ತಾಲೂಕು ಕಚೇರಿಗಳು ಸ್ಥಾಪಿಸಬೇಕು

ಮಸ್ಕಿಯಲ್ಲಿ ತಾಲೂಕು ಕಚೇರಿಗಳು ಸ್ಥಾಪಿಸಬೇಕು

ಬೆಂಗಳೂರು: ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಿಸುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಕಂದಾಯ ಸಚಿವ ಅಶೋಕ್ ಅವರು ಸೋಮವಾರ ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಬಸವನಗೌಡ ತುರ್ವಿ ಹಾಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಅಲ್ಲಿ ವಿವಿಧ ಶಾಖೆಗಳ ತಾಲೂಕು ಕಚೇರಿಗಳನ್ನು ಸ್ಥಾಪಿಸಲು ಎಲ್ಲ ಶಾಖೆಗಳಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು. ಮಸ್ಕಿಯನ್ನು ಐದು ವರ್ಷಗಳ ಹಿಂದೆ ತಾಲೂಕು ಕೇಂದ್ರವೆAದು ಘೋಷಿಸಲಾಯಿತು. ಆದರೆ ಕೇವಲ ಎರಡು ಅಥವಾ ಮೂರು ಕಚೇರಿಗಳು ಇರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಸವನಗೌಡ ಹೇಳಿದರು. ತಾಲೂಕು ಪಂಚಾಯತಿ, ತಾಸೀಲ್ದಾರ್‌ಕಚೇರಿ ಹೊರತು ಬೇರೇನೂ ಕಚೇರಿಗಳಿಲ್ಲ ಎಂದು ಟೀಕಿಸಿದರು.

Related