ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ

ಪ್ರತಿಭಾವಂತರಿಗೆ ಪ್ರೋತ್ಸಾಹ ಅಗತ್ಯ

ಬೆಂಗಳೂರು: ಕ್ರೀಡೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಿ ಬೆಳೆಸಬೇಕು. ಇಂದಿನ ದಿನಗಳಲ್ಲಿ ಕ್ರಿಕೆಟ್ ರೀತಿ ಫುಟ್ಬಾಲ್ ಆಟವನ್ನು ಸಹ ಪ್ರೋತ್ಸಾಹಿಸಿ ಜನಪ್ರಿಯಗೊಳಿಸಬೇಕು ಎಂದು ಖ್ಯಾತ ಕನ್ನಡ ನಟರಾದ ಅನಿರುಧ್ ಜತ್ಕರ್ ಆಶಿಸಿದರು.
ನಿಜ ಹೇಳಬೇಕೆಂದರೆ ನನಗೆ ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸುವ ಭಾಗ್ಯ ದೊರೆತಿರಲಿಲ್ಲ. ಇಂದು ಅದ್ಭುತ ಪಂದ್ಯಾವಳಿ ವೀಕ್ಷಿಸುವ ಭಾಗ್ಯ ದೊರೆಯಿತು ಎಂದು ತಿಳಿಸಿದರು.
ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಕಂಠೀರವ ಸ್ಟೇಡಿಯಂನಲ್ಲಿ ಜೂನ್ ೧೫ ರಿಂದ ಜೂನ್ ೧೭ ರವರೆಗೆ ಮೂರು ದಿನಗಳ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಇಂದು ಫೈನಲ್ ಪಂದ್ಯಾವಳಿಯಲ್ಲಿ ಬೆಂಗಳೂರು ರೂಟ್ಸ್ ತಂಡ ವಿಜಯೋತ್ಸವ ಭಾರಿಸಿತು. ಮಂಗಳೂರು ಎಫ್‌ಸಿ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.
ವಿಜೇತ ತಂಡಕ್ಕೆ ಒಂದು ಲಕ್ಷ ಬಹುಮಾನವನ್ನು ನೀಡಲಾಯಿತು ಮತ್ತು ಎರಡನೇ ಸ್ಥಾನ ಪಡೆದ ಮಂಗಳೂರು ಎಫ್‌ಸಿ ತಂಡಕ್ಕೆ ಎರಡನೇ ಸ್ಥಾನ ಲಭಿಸಿತು. ಮೂರನೇ ಸ್ಥಾನಕ್ಕೆ ೫೦೦೦೦ ರೂಪಾಯಿ ಬಹಮಾನ ನೀಡಲಾಯಿತು.
ನಟ ಅನಿರುದ್ಧ್ ಮತ್ತು ಎಂಎಲ್‌ಸಿ ರಾಮೋಜಿ ಗೌಡ, ಸ್ಯಾಂಡಲ್‌ವುಡ್ ನಿರ್ದೇಶಕರುಗಳಾದ ಜಾಕೋಬ್ ವರ್ಗಿಸ್, ಹರಿ ಸಂತೋಷ್ ಮತ್ತು ಎಂ ಆನಂದ್ ರಾಜ್, ಸ್ಪರ್ಶ್ ಹಾಸ್ಪಿಟಲ್‌ನ ಸಹಾಯಕ ವ್ಯವಸ್ಥಾಪಕರು (ಮಾರ್ಕೆಟಿಂಗ್) ಶಿವರಾಜ್ ಶರಣ್ ಪಾಟೀಲ್ ಬಹುಮಾನ ವಿತರಿಸಿದರು.
ಸತತ ಮೂರು ದಿನಗಳಿಂದ ನಡೆದ ಫುಟ್ಬಾಲ್ ಪಂದ್ಯಾವಳಿಗೆ ಇಂದು ತೆರೆ ಬಿದ್ದಿದ್ದು, ಕಾರ್ಯಕ್ರಮ ಪ್ರಾಯೋಜಕರಾದ ಕೃಪಾನಿಧಿ ಗ್ರೂಪ್ಸ್ ಆಫ್ ಇನ್ಸ್ಟ್ಯೂಷನ್‌ರವರು ತಂಡಗಳಿಗೆ ಬಹುಮಾನದ ಚೆಕ್‌ಗಳನ್ನು ನೀಡಿ ಸಹಕರಿಸಿದರು.

ಇದೇ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಸಂಸ್ಥೆಯ ಚೆರ‍್ಮೆನ್ ಪ್ರೋ. ಡಾ. ನಾಗಪಾಲ್‌ರವರು ನಮ್ಮಲ್ಲೂ ಹಲವಾರು ಕ್ರೀಡೆ ಪ್ರತಿಭೆಗಳಿದ್ದು, ಅವರನ್ನು ಗುರುತಿಸುವ ಕೆಲಸಕ್ಕೆ ಮುಂದಾಗಬೇಕು. ಫುಟ್ಬಾಲ್ ವೀಕ್ಷಿಸುವ ಅಪಾರ ಅಭಿಮಾನಿ ಬಳಗವಿದ್ದು, ಈ ಕ್ರೀಡೆಯನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆ ಎಂದರು. ಬೆಂಗಳೂರು ರೂಟ್ಸ್ ತಂಡ ಗೆಲುವನ್ನು ಸಾಧಿಸಿದ್ದು ಅಭಿನಂದನೆಗಳನ್ನು ತಿಳಿಸಿದರು.

Related