ಬಾಲಕನ ಶೋಧ ಕಾರ್ಯ ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಬಾಲಕನ ಶೋಧ ಕಾರ್ಯ ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ದೇವದುರ್ಗ : ತಾಲೂಕಿನ ಜಾಲಹಳ್ಳಿ ವ್ಯಾಪ್ತಿಯ ಮುದುಗೋಟ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಕೃಷ್ಣಾ ನದಿಗೆ ಈಜಲು ಹೋದ ನಾಲ್ಕು ಬಾಲಕರಲ್ಲಿ 14 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸ್ಥಳಕ್ಕೆ ತಹಶೀಲ್ದಾರ್ ಮಧುರಾಜ್ ಯಾಳಗಿ ಭೇಟಿ ನೀಡಿ ಶೋಧ ಕಾರ್ಯ ವೀಕ್ಷಿಸಿದರು.

ಸ್ಥಳದಲ್ಲಿದ್ದ ಜೆಡಿಎಸ್ ನಾಯಕ ಕರೆಮ್ಮ ಜಿ ನಾಯಕ ಅವರು, ಹೇಗಾದರೂ ಮಾಡಿ ನೀರಿನಲ್ಲಿ ಮುಳುಗಿರುವ ಬಾಲಕನನ್ನು ಪತ್ತೆಹಚ್ಚಲು ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯ ಕೈಗೊಳ್ಳಲು ಒತ್ತಾಯಿಸಿದರು. ತಹಶೀಲ್ದಾರ್ ತಕ್ಷಣವೇ ಉತ್ತರಿಸಿ ಈಗಾಗಲೇ ಸಹಾಯಕ ಆಯುಕ್ತರಿಗೆ ತಿಳಿಸಿದ್ದೆವು ಅವರು ಜಿಲ್ಲೆಯ ಶೋಧ ತಂಡಗಳ ಸಂಪರ್ಕಿಸಿದ್ದಾರೆ ಎಂದರು.

ಸರಾಸರಿ ಬಾಲಕ ನೀರಿನಲ್ಲಿ ಮುಳುಗಿ ಆರು ತಾಸು ಆಗಿದ್ದರೂ ಕಾಣೆಯಾದ ಬಾಲಕ ಪತ್ತೆಯಾಗಿಲ್ಲ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ರೋಧನೆ ಆಕ್ರಂದನ ಮುಗಿಲು ಮುಟ್ಟುವಂತ್ತಿತ್ತು. ಈ ಸಂದರ್ಭದಲ್ಲಿ ಜಾಲಹಳ್ಳಿ ಪಿ ಐ ನಧಾಪ್, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್, ಜಾಲಹಳ್ಳಿ ಪಿಎಸ್‌ಐ ಸಾಬಯ್ಯ ಮತ್ತಿತರರು ಇದ್ದರು.

Related