ಟ್ರೋಲ್ ಗಳಿಗೆ ಟಾಂಗ್ ಕೊಟ್ಟ ಸುಶ್ಮಿತಾ ಸೇನ್..!

ಟ್ರೋಲ್ ಗಳಿಗೆ ಟಾಂಗ್ ಕೊಟ್ಟ ಸುಶ್ಮಿತಾ ಸೇನ್..!

ಕಳೆದ ಕೆಲವು ದಿನಗಳಿಂದ ಸುಶ್ಮಿತಾ ಸೇನ್ ಇಂಡಸ್ಟ್ರಿಯಲ್ಲಿ ಸುದ್ದಿಯಲ್ಲಿದ್ದಾರೆ. ಲಲಿತ್ ಮೋದಿ ಜೊತೆಗಿನ ಅವರ ಡೇಟಿಂಗ್ ವಿಚಾರ ಬೆಳಕಿಗೆ ಬಂದ ನಂತರ ಅದೇ ಚರ್ಚೆ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ವಿಷಯದ ಬಗ್ಗೆ ಶಾಕಿಂಗ್ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.ಸುಶ್ಮಿತಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಎದುರಿಸಿದ್ದಾರೆ. ಇದೀಗ ಈ ಟ್ರೋಲ್ಗಳಿಗೆ ಸುಶ್ಮಿತಾ ಉತ್ತರ ನೀಡಿದ್ದಾರೆ.

ಸುಶ್ಮಿತಾ ಸೇನ್ ಇನ್ನೂ 46 ನೇ ವಯಸ್ಸಿನಲ್ಲಿ ಮದುವೆಯಾಗಿಲ್ಲ, ಆದರೆ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ. ಸುಶ್ಮಿತಾ ಸೇನ್ ಹತ್ತು ಜನರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡುತ್ತಿದೆ. ಇತ್ತೀಚಿಗೆ ಸುಶ್ಮಿತಾ ಲಲಿತ್ ಮೋದಿ ಜೊತೆಗಿರುವುದು ಹಣಕ್ಕಾಗಿ ಮಾತ್ರ ಎಂದು ಹಲವರು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.


ಟ್ರೋಲಿಗರು ಲಲಿತ್ ಮೋದಿ ಜೊತೆ ಸುಶ್ಮಿತಾ ಸಂಬಂಧ ಬಹಿರಂಗವಾಗುತ್ತಿದ್ದಂತೆ ಅವರನ್ನು ಗೋಲ್ಡ್​ ಡಿಗ್ಗರ್​ ಎಂದು ಟೀಕಿಸಿದ್ದಾರೆ. ಇದರಿಂದ ನಟಿ ಬೇಸತ್ತಿದ್ದು ನಾನು ಗೋಲ್ಡ್​ ಡಿಗ್ಗರ್​ ಅಲ್ಲ, ಡೈಮಂಡ್​ ಡಿಗ್ಗರ್​​ ಎಂದಿದ್ದಾರೆ.

Related