ಎದೆತುಂಬಿ ಹಾಡುವೆನು ಸೂರ್ಯಕಾಂತ್

ಎದೆತುಂಬಿ ಹಾಡುವೆನು ಸೂರ್ಯಕಾಂತ್

ಚಿಂಚೋಳಿ: ಜೀ ವಾಹಿನಿಯಲ್ಲಿ ಪ್ರಸಾರವಾಗುವ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಸೂರ್ಯಕಾಂತ್ ಆಯ್ಕೆಯಾಗಿ ಗ್ರಾಮಕ್ಕೆ ಬಂದಿದ್ದರಿಂದ ತಾಲೂಕಿನ ಗಡು ಲಿಂಗದಳ್ಳಿ ಗ್ರಾಮದ ಸಂಗಮೇಶ್ವರ ದೇವಾಲಯದಲ್ಲಿ ಬುಧವಾರ ಕಾರ್ಯಕ್ರಮ ಮಾಡಲಾಯಿತು. ಮುಖಂಡರು ಮತ್ತು ಗ್ರಾಮಸ್ಥರು ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರ ಸ್ವಾಗತಕೋರಿದರು.
ಗ್ರಾ.ಪಂ.ಅಧ್ಯಕ್ಷ ಗೌರಿಶಂಕರ ಉಪ್ಪಿನ್ ಮಾತನಾಡಿದ ಗಡಿನಿಂಗದಳ್ಳಿ ಗ್ರಾಮಕ್ಕೆ ಹೆಮ್ಮೆ ತಂದು ಕೊಟ್ಟಂಥ ಸೂರ್ಯಕಾಂತ್‍ಗೆ ಗ್ರಾಮಸ್ಥರಿಂದ ಕೋಟಿ ಕೋಟಿ ವಂದನೆಗಳು. ಕರ್ನಾಟಕದ ತುಂಬೆಲ್ಲ ಗ್ರಾಮದ ಹೆಸರು ಮನೆಮಾತಾಗಿದೆ. ಗಾಯನ ಸ್ಪರ್ಧೆಯಲ್ಲಿ ವಿಜೇತರಾಗಿ ಬರುತ್ತಾರೆಂಬ ನಂಬಿಕೆ ನಮ್ಮೆಲ್ಲರಿಗೂ ಇದೆ, ಕರ್ನಾಟಕ ಅಲ್ಲದೆ ದೇಶದ ತುಂಬೆಲ್ಲ ಗ್ರಾಮದ ಹೆಸರು ತರುತ್ತಾರೆ. ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು .
ನಂತರ ಮಾತನಾಡಿದ ಸೂರ್ಯಕಾಂತ್ ಸೈಬಣ್ಣ ಗಡಿನಿಂಗದಳ್ಳಿ ಗ್ರಾಮದ ಉಪಕಾರ ಸದಾ ನನ್ನ ಮೇಲೆ ಇದೆ. ಚಿಕ್ಕವನಿಂದ ಹಿಡಿದು ಇಲ್ಲಿಯವರೆಗೆ ನನಗೆ ಮಗನಂತೆ ಅಣ್ಣ ತಮ್ಮನಂತೆ ಸದಾ ಆಶೀರ್ವದಿಸಿದೆ. ವಾಹಿನಿಯ ತೀರ್ಪುಗಾರರು ತ್ರಿಮೂರ್ತಿಗಳಂತೆ ಬ್ರಹ್ಮ, ವಿಷ್ಣು, ಮಹೇಶ್ವರರಂತೆ, ನಿಜವಾದ ಕಲೆಗೆ ಬೆಲೆ ಕೊಡುವವರು ನೈಜ, ಪ್ರತಿಭೆಗೆ ಸ್ಥಾನ ದೊರಕಬೇಕಾದರೆ ಕಲರ್ಸ್ ವಾಹಿನಿಯಲ್ಲಿ ಮಾತ್ರ ನಾನೆಂದು ಮರೆಯುವ ಹಾಗಿಲ.್ಲ ನಮ್ಮ ತಂದೆಯವರು ಪ್ರತಿನಿತ್ಯ ಕುಡಿಯುತ್ತಿದ್ದರು. ನಮ್ಮ ತಾಯಿ ಕಷ್ಟಪಟ್ಟು ಕೂಲಿನಾಲಿ ಮಾಡಿ ಈ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಗ್ರಾಮದ ಪ್ರತಿಯೊಬ್ಬರು ನನಗೆ ಸಹಕಾರ ಕೊಟ್ಟಿದಕ್ಕೆ ಅನಂತ ಧನ್ಯವಾದಗಳು ಎಂದು ಹೇಳಿದರು .
ಈ ಸಂದರ್ಭದಲ್ಲಿ ಮಾಜಿ ತಾ.ಪಂ ಸದಸ್ಯ ಪ್ರೇಮಸಿಂಗ್ ಜಾಧವ್, ಸಂಗಮೇಶ ಪಾಟೀಲ್, ರಮೇಶ್ ಶೆಟ್ಟಿ ,ಈಶ್ವರ್ ದಂಡಿನ್, ತೀರ್ಥಪ್ರಸಾದ್, ಮನೋಜ್ ಬಾವಿಕಟ್ಟಿ, ಮಲ್ಲಣ್ಣ, ಮಲ್ಲಿಕಾರ್ಜುನ್, ಚರಣ್ ರೆಡ್ಡಿ, ವಿಷ್ಣುಕಾಂತ್ ಚನ್ನೂರ್, ಜಗನ್ನಾಥ್ ಮುಖಂಡರು ಮತ್ತು ಗ್ರಾಮಸ್ಥರು ಇನ್ನಿತರರಿದ್ದರು.

Related