ಬಂದ್‌ಗೆ ಕರವೇ ಬೆಂಬಲ

ಬಂದ್‌ಗೆ ಕರವೇ ಬೆಂಬಲ

ಕೋಲಾರ: ಡಿ.5ರ ಕನ್ನಡಪರ ಸಂಘಟನೆಗಳ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ನೀಡಲಿದೆ ಆದರೆ ಇದು ಮರಾಠ ಸಮುದಾಯದ ವಿರುದ್ಧ ಅಲ್ಲ ಎಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ. ರಾಘವೇಂದ್ರ ಹೇಳಿದರು.  ಕರವೇ ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಶಾಸಕ ಯತ್ನಾಳ್ ಕಿಡಿಗೇಡಿ ಹೇಳಿಕೆ ಮತ್ತು ಸರ್ಕಾರದ ಅವೈಜ್ಞಾನಿಕ ತೀರ್ಮಾನದ ವಿರುದ್ಧ ರಾಜ್ಯ ಬಂದ್‌ಗೆ ಬೆಂಬಲ ನೀಡಲಾಗುತ್ತಿದ್ದು ಇದು ಮರಾಠ ಸಮುದಾಯದ ವಿರುದ್ಧದ ಹೋರಾಟವಲ್ಲ ಎಂದರು.
ಸಂಘಟನೆಗಳನ್ನು ರೋಲ್‌ಕಾಲ್ ಎಂದು ಕರೆಯುವ ಮೂಲಕ ಅಸಂಬದ್ಧವಾಗಿ ಮಾತನಾಡಿರುವ ಶಾಸಕ ಯತ್ನಾಳ್ ಕನ್ನಡಪರ ಹೋರಾಟಗಾರರ ಕ್ಷಮೆ ಕೋರುವ ಜತೆಗೆ ಸರ್ಕಾರ ಜಾತಿಗೊಂದು ನಿಗಮ,ಪ್ರಾಧಿಕಾರವನ್ನು ಸ್ಥಾಪನೆ ಮಾಡುವ ಮೂಲಕ ಓಟ್‌ಬ್ಯಾಂಕ್ ರಾಜಕಾರಣ ನಡೆಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಡಿ.5ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಾರಿಗೆ ಬಸ್ ನಿಲ್ದಾಣದ ಸಿಗ್ನಲ್ ವೃತ್ತದಲ್ಲಿ ಕರವೇಯಿಂದ ಶಾಸಕ ಯತ್ನಾಳ್ ಭೂತದಹನ ನಡೆಯಲಿದ್ದು ಜಿಲ್ಲೆಯ ಎಲ್ಲ ಕರವೇ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಬೇಕೆಂದು ಮನವಿ ಮಾಡಿದರು. ಕರವೇ ಸಂಘಟನೆಯಲ್ಲಿ ಸಾವಿರಾರು ಮರಾಠ ಸಮಾಜದ ಬಂಧುಗಳಿದ್ದು ನೂರಾರು ಮಂದಿ ಪದಾಧಿಕಾರಿಗಳಾಗಿದ್ದಾರೆ.
ಸಭೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜು, ಗೌರವಾಧ್ಯಕ್ಷ ಎನ್.ಮುನಿರಾಜು, ಕೋದಂಡರಾಮಯ್ಯ, ಮದಿರೆಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾಬಾಯಿ ಮಾಡಿಕರ್, ಮುಖಂಡರಾದ ಲೋಕೇಶ್, ಮೆಹಬೂಬ್, ನವೀನ್, ಐದರ್‌ಷರೀಫ್, ಶಾಂತಮ್ಮ, ನಾಗರತ್ನ, ಮಾಲೂರು ಶ್ರೀನಿವಾಸ್, ಬಂಗಾರಪೇಟೆ ರಾಮ್‌ಪ್ರಸಾದ್, ಮುಳಬಾಗಲು ನಾಗೇಶ್ ಬಾಬು, ಸಿ.ಜಿ.ಮುರಳಿ ಭಾಗವಹಿಸಿದ್ದರು.

Related