ಸಿಬ್ಬಂದಿಗಳ ಜೊತೆ ಸಭೆ : ಮುಖ್ಯ ಆಯುಕ್ತರು ಶ್ರೀ ತುಷಾರ್ ಗಿರಿನಾಥ್

ಬಿಬಿಎಂಪಿ ನೀಡುವ ಸೇವೆಗಳನ್ನು ನಾಗರಿಕರು ಸುಲಭವಾಗಿ ಪಡೆಯುವಂತಾಗಬೇಕು. ಎಲ್ಲರೂ ಒಂದು ಸೇನೆಯಾಗಿ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ತಿಳಿಸಿದರು.

ಇದೇ ಪ್ರಥಮ ಬಾರಿಗೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಭಾಗದ ಅಧಿಕಾರಿ ಸಿಬ್ಬಂದಿಗಳ(ಸುಮಾರು 1000 ಕ್ಕೂ ಹೆಚ್ಚು)  ಜೊತೆ ಪಾಲಿಕೆಯ ಕಾರ್ಯದಕ್ಷತೆಗೆ ಸಂಬಂಧಿಸಿದಂತೆ,  ಅಧಿಕಾರಿಗಳು ನಾಗರಿಕರ ಜೊತೆ ನಿಕಟವಾದ ಸಂಬಂಧವಿಟ್ಟುಕೊಂಡು ಉತ್ತಮ ರೀತಿಯಲ್ಲಿ ಸ್ಪಂದಿಸಿದಾಗ ಪಾಲಿಕೆಯ ಮೇಲೆ ಉತ್ತಮ ಅಭಿಪ್ರಾಯ ಬೀರಲು ಸಾಧ್ಯ. ಅಧಿಕಾರಿಗಳ ಮನೋಭಾವ ಬದಲಾದರೆ ಸಮಾಜದಲ್ಲಿ ನಾಗರಿಕರು ಕೂಡ ಸ್ಪಂದಿಸಿ ಅದಕ್ಕೆ ತಕ್ಕಂತೆ ಬದಲಾಗುತ್ತಾರೆ ಎಂದು ತಿಳಿಸಿದರು.

ಬಿಬಿಎಂಪಿ ಅಧಿಕಾರಿ/ನೌಕರರ ಸಮಸ್ಯೆಗಳಿದ್ದರೆ ತಿಳಿಸಿ ಎಂದು  ಹೇಳಿದರು. ಈ ವೇಳೆ ಬಿಬಿಎಂಪಿ ಅಧಿಕಾರಿ ನೌಕರರ ಸಮಸ್ಯೆಗಳನ್ನು ಮುಖ್ಯ ಆಯುಕ್ತರು ರವರಲ್ಲಿ ಉನ್ನತ ತರಬೇತಿ/ಕಾರ್ಯಾಗಾರ, ನೌಕರರ ಮುಂಬಡ್ತಿ, ಅಭಿಯಂತರ ನೇಮಕಾತಿ, ಅಧಿಕಾರಿ/ಸಿಬ್ಬಂದಿಗಳಿಗೆ ಆರೋಗ್ಯ ಸೇವೆಯ ಚಿಕಿತ್ಸೆ ಬಗ್ಗೆ ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿ ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಬಗೆಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.  ಸಭೆಯಲ್ಲಿ ವಿಶೇಷ ಆಯುಕ್ತರುಗಳು, ಉಪ ಆಯುಕ್ತರುಗಳು, ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

Related