ವಿರೋಧ ಪಕ್ಷದವರು ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ: ಡಿಕೆಶಿ

ವಿರೋಧ ಪಕ್ಷದವರು ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಲಿ: ಡಿಕೆಶಿ

ಕಲಬುರಗಿ: ಪ್ರಜ್ವಲ್ ರೇವಣ್ಣನ ಪ್ರಕರಣ ಬೆಳಕಿಗೆ ಬಂದು ಈಗಾಗಲೇ 4-5 ದಿನ ಕಳೆದರೂ ಕೂಡ ವಿರೋಧ ಪಕ್ಷದ ನಾಯಕರಾಗಿ, ಒಬ್ಬರು ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಬಿಜೆಪಿ ಪಕ್ಷದವರು ಯಾರು ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಎತ್ತುತ್ತಿಲ್ಲ.

ಈಗಾಗಲೇ ಪ್ರಜ್ವಲ್ ರೇವಣ್ಣನ ನೀಚ ಕೆಲಸದಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ನೂರಾರು ಹೆಣ್ಣು ಮಕ್ಕಳು ಇದ್ದಾರಲ್ಲ, ಅವರಿಗೆ ದೇವೇಗೌಡರು ಹೋಗಿ ಸಮಾಧಾನ ಮಾಡಬೇಕು ಅಥವಾ ಕುಮಾರಸ್ವಾಮಿ ಹೋಗಿ ಸಮಾಧಾನ ಮಾಡಬೇಕು, ಇವರು ಯಾರು ಇಲ್ಲಿವರೆಗೂ ಯಾಕೆ ಸಂತ್ರಸ್ತೆಯರನ್ನು ಹುಡುಕಿ ಅವರಿಗೆ ಸಮಾಧಾನ ಅಥವಾ ಧೈರ್ಯ ಹೇಳುವ ಕೆಲಸ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಕ್ರೋಶ ಅವರ ಹಾಕಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸುಳ್ಳು ಹೇಳುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ: ಜಿಟಿ ದೇವೇಗೌಡ

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಅಂತ ಹೇಳ್ತಾರಲ್ವಾ? ಈಗಾಗಲೇ ಸಂತ್ರಸ್ತೆಯರ ಫೋಟೋಗಳನ್ನು ನೋಡಿದ್ದಾರಲ್ವ? ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕರು ಹೋಗಿ ಭೇಟಿ ಮಾಡ್ಲಿ, ಯಾಕೆ ಇಲ್ಲಿವರೆಗೂ ಭೇಟಿ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೈಕ ಹಿಡಿದುಕೊಂಡು ಓಡಾಡಿದ್ದರಲ್ಲ ಈಗ ಯಾಕೆ ಈ ಸುದ್ದಿಯನ್ನು ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಒಬ್ಬ ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ ಆಡುವ ಮಾತು ಆಶ್ಚರ್ಯ ಹುಟ್ಟಿಸುತ್ತದೆ. ಪ್ರಜ್ವಲ್ ರೇವಣ್ಣಗೆ 2019 ರಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದು ಸತ್ಯ, ಆದರೆ ಈಗ ಅವರು ಯಾವ ಪಾರ್ಟಿಯ ಬೆಂಬಲದಿಂದ ಸ್ಪರ್ಧೆ ಮಾಡುತ್ತಿದ್ದಾರೆ? ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಬೇಡ ಎಂದ ಶಿವಕುಮಾರ್, ಅಶೋಕ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಡಿ ವಿ ಸದಾನಂದಗೌಡ, ಸುನೀಲ್ ಕುಮಾರ್, ಸಿಟಿ ರವಿ ಮೊದಲಾದವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯರ ವಿಳಾಸಗಳನ್ನು ಪತ್ತೆ ಮಾಡಿ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಲಿ ಎಂದರು.

 

Related