ಭದ್ರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ

  • In State
  • August 30, 2021
  • 442 Views
ಭದ್ರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ

ಔರಾದ್ : ತಾಲುಕಿನ ಬಾವಗಿ ಗ್ರಾಮದಲ್ಲಿ ನಾಲ್ಕನೇ ಶ್ರಾವಣ ಸೋಮವಾರ ಪ್ರಯುಕ್ತ ಭದ್ರೇಶ್ವರ ಸ್ವಾಮಿಯ ದೇಗುಲದಲ್ಲಿ ಬೆಳಿಗ್ಗೆ ನಮಕ-ಚಮಕ ವೇದಘೋಷಗಳೊಂದಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಾಡಲಾಯಿತು. ಈ ವೇಳೆ ಭದ್ರೇಶ್ವರ ಮಠದ ಶ್ರೀ ಶಿವುಕುಮಾಕ್ ಸ್ವಾಮಿ ಕೊರೋನಾ ಮೂರನೇ ಅಲೆಯಿಂದ ಜನರನ್ನು ರಕ್ಷಿಸು. ನಮ್ಮ ಈ ಭಾಗದಲ್ಲಿ ಸಮೃದ್ಧ ಮಳೆಯಾಗಲಿ, ಉತ್ತಮ ಬೆಳೆಗೆ ಬೆಂಬಲ, ಬೆಲೆ ಸಿಗಲಿ. ಈ ದೇಶದ ಅನ್ನದಾತ ರೈತನ ಜೀವನ ಸುಖಕರವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. 4ನೇ ಸೋಮವಾರದಂದು ರಾಜ್ಯದಲ್ಲಿ ಮಾತ್ರವಲ್ಲದೇ, ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶದಿಂದಲೂ ಬಂದ ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.

Related