ವೃತ್ತಿ ಘನತೆಗೆ ಚ್ಯುತಿ ಬರದಂತೆ ಸೇವೆ ಸಲ್ಲಿಸಿ

ವೃತ್ತಿ ಘನತೆಗೆ ಚ್ಯುತಿ ಬರದಂತೆ ಸೇವೆ ಸಲ್ಲಿಸಿ

ಚಿಕ್ಕಬಳ್ಳಾಪುರ: ಜಿಲ್ಲಾ ಆಡಳಿತ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ, ಡಾಕ್ಟರ್ ಬಿ.ಆರ್.ಅಂಬೇಡ್ಕರ್, ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಆಡಳಿತ ನಾನಾ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಿಕಾ ಕ್ಷೇತ್ರದಲ್ಲಿ ೨೫ ವರ್ಷಗಳಿಗೂ ಹೆಚ್ಚುಕಾಲ ವೃತ್ತಿ ಘನತೆಗೆ ಚ್ಯುತಿ ಬರದಂತೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಜಿಲ್ಲೆಯ ಹಿರಿಯ ಪತ್ರಕರ್ತರಾದ ಸಿ.ವಿ. ಲಕ್ಷ್ಮಣ ರಾಜು ಅವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಿ.ವಿ. ಲಕ್ಷ್ಮಣ ರಾಜು ಅವರು , ಖ್ಯಾತ ಪತ್ರಕರ್ತರಾದ ಶ್ರೀ ಜಾಣಗೆರೆ ವೆಂಕಟರಾಮಯ್ಯ ಅವರ “ಮಾರ್ಧನಿ” ವಾರಪತ್ರಿಕೆ ಹಾಗೂ ಡಾಕ್ಟರ್ ಎಲ್. ಹನುಮಂತಯ್ಯ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿದ್ದ “ಅಂಬೇಡ್ಕರ್ ವಾಹಿನಿ”ಪಾಕ್ಷಿಕ ಪತ್ರಿಕೆ ಗಳಲ್ಲಿ ವರದಿಗಾರರಾಗಿ ೨೫ ವರ್ಷಗಳ ಹಿಂದೆ ವೃತ್ತಿಯನ್ನು ಆರಂಭಿಸಿದರು. ದಲಿತ ಸಂವೇದನೆಯ ಧ್ವನಿಯಾಗಿ ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ಶೋಷಣೆಗೆ ಒಳಗಾದ ಎಲ್ಲಾ ವರ್ಗದವರ ಮುಖವಾಣಿಯಾಗಿದ್ದ “ಅಂಬೇಡ್ಕರ್ ವಾಹಿನಿ”ಇವರ ಬರವಣಿಗೆಯನ್ನು ಪ್ರಬುದ್ಧತೆ ಹೇಳಿಗೆ ಸಾಗುವಂತೆ ಮಾಡಿತ್ತು. ಸತತ ೨೫ ವರ್ಷಗಳ ಕಾಲ ಪತ್ರಿಕೆಯ ಸಂಪಾದಕೀಯ ಲೇಖನದಿಂದ ದಿಂದ ಹಿಡಿದು ಎಲ್ಲಾ ರೀತಿಯ ಲೇಖನಗಳಲ್ಲಿ ಇವರ ವಿಚಾರಗಳು ಹಾಸುಹೊಕ್ಕಾಗಿವೆ. ಶಿಡ್ಲಘಟ್ಟ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಕೋಲಾ ನರಸಿಂಹಮೂರ್ತಿ,ಎಸ್.ವಿ.ಅಯ್ಯರ್,ರಹಮತ್ತುಲ್ಲಾ ಅವರೊಂದಿಗೆ ಸಂಘದ ಅಭಿವೃದ್ಧಿಗೆ ತೊಡಗಿಸಿಕೊಂಡು ಕೆಲಸ ಮಾಡಿದ್ದಾರೆ. ಶಿಡ್ಲಘಟ್ಟ ತಾಲೂಕಿನಿಂದ ಹೊಸದಿಗಂತ ರಾಜ್ಯ ದಿನಪತ್ರಿಕೆ, ವಾರ್ತಾಭಾರತಿ ರಾಜ್ಯ ದಿನಪತ್ರಿಕೆ, ವರದಿಗಾರರಾಗಿಯೂ ಕೆಲಸ ಮಾಡಿದ್ದರು. ಇಂದು ಸಂಜೆ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಯು ಪತ್ರಿಕೆಯ ಎಲ್ಲಾ ಹಂತಗಳಲ್ಲಿಯೂ ಸಾಕಷ್ಟು ಅನುಭವ ಗಳಿಸಿದ್ದಾರೆ.

Related