ನರೇಂದ್ರ ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ?: ರಾಜು ಕಾಗೆ

ನರೇಂದ್ರ ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ?: ರಾಜು ಕಾಗೆ

ಬೆಳಗಾವಿ: ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಭರ್ಜರಿ ಮತ ಪ್ರಚಾರ ನಡೆಯುತ್ತಿದ್ದು, ಕಾಂಗ್ರೆಸ್ ನ ಶಾಸಕ ರಾಜು ಕಾಗೆ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೆಳಗಾವಿ ಕಾಕವಾಡ ತಾಲೂಕಿನಲ್ಲಿ ಮತ ಪ್ರಚಾರ ಮಾಡುತ್ತಿರುವ ಸಂದರ್ಭದಲ್ಲಿ, ಈ ದೇಶದಲ್ಲಿ ಮೋದಿಯವರನ್ನ ಬಿಟ್ಟರೆ ಬೇರೆ ಯಾರು ಪ್ರಧಾನಿ ಹುದ್ದೆಗೆ ಲಾಯಕ್ಕಿಲ್ಲವಾ? ಮೋದಿ ಒಬ್ಬರೇನಾ ಪ್ರಧಾನಿ ಹುದ್ದೆಗೆ ಲಾಯಕ್ಕಿರೋದು ಎಂದು ಪ್ರಶ್ನಿಸಿದ್ದಾರೆ.

ಮೋದಿ ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ? ಮೋದಿ ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಕಾಗೆ ಅವರು ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ

ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಮೋದಿ ಇಲ್ಲಿ ಬಂದು ನೋಡುತ್ತಾರಾ? ಇಲ್ಲಿ ಏನಾದರೂ ಸಮಸ್ಯೆ ಆದರೆ ಮೋದಿ ಬರುವುದಿಲ್ಲ. ಇಲ್ಲಿ ನಾವೇ ನಿಮ್ಮ ಸಮಸ್ಯೆ ಆಲಿಸಬೇಕು. ನರೇಂದ್ರ ಮೋದಿ ಅವರು 3,000 ಕೋಟಿ ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ ಇಂಥವರನ್ನು ತಗೊಂಡು ಏನು ಮಾಡ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Related