ಬಂಧಿತರನ್ನು ಬಿಡುಗಡೆ ಮಾಡಲು ದಂಡಾಧಿಕಾರಿಗೆ ಮನವಿ

ಬಂಧಿತರನ್ನು ಬಿಡುಗಡೆ ಮಾಡಲು ದಂಡಾಧಿಕಾರಿಗೆ ಮನವಿ

ದೇವರಹಿಪ್ಪರಗಿ : ಉತ್ತರ ಪ್ರದೇಶದಲ್ಲಿ ರಾಜಕೀಯ ದುರುದ್ದೇಶ ಗೋಸ್ಕರ ಮುಸ್ಲಿಂ ಸಮಾಜದ ವಿದ್ವಾಂಸರಾದ. ಮೌಲಾನ ಕಲೀಮ್ ಸಿದ್ದಕಿ ಮೌಲಾನಾ ಊಮರ್ ಗೌತಮ್. ಮಫ್ತಿ ಜಾಂಗೀರ್ ಖಾಸಿಂ. ಅವರನ್ನು ಸಮಾಜದ ನಾಯಕರನ್ನು ವಿನಾಕಾರಣ ಬಂಧಿಸಿರುವುದನ್ನು ಖಂಡಿಸಿ ಕೂಡಲೇ ಬಿಡುಗಡೆ ಮಾಡಲು ಆಗ್ರಹಿಸಿ ದೇವರಹಿಪ್ಪರಗಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ತಾಲ್ಲೂಕು ದಂಡಾಧಿಕಾರಿ ಸಿ.ಎ .ಗುಡದಿನ್ನಿ ಅವರಿಗೆ ಮನವಿ ಮಾಡಿದರು.

ದೇವರಹಿಪ್ಪರಗಿ ಪಟ್ಟಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಮುಸ್ಲಿಂ ಸಮಾಜದ ನಾಯಕರು ಸಮಾಜದ ಎಲ್ಲ ಹಿರಿಯರು ಯುವಕರು ಟಿಪ್ಪು ಸುಲ್ತಾನ್ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಬೃಹತ್ ಜನಸಂಖ್ಯೆ ಸೇರಿ ಪ್ರತಿಭಟನೆ ಜಾಥಾ ನಡೆಯಿತು.

ಈ ವೇಳೆ ಸಮಾಜದ ಹಿರಿಯರು ಹಾಗೂ ಸಮಾಜದ ಗುರುಗಳು ಮಾತನಾಡಿ, ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಲ್ಲಿ ಬಂಧಿಸಿರುವ ನಮ್ಮ ಸಮಾಜದ ಮುಖಂಡರನ್ನು ಹಾಗೂ ಗುರುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಅವರ ಮೇಲೆ ಆಪಾದನೆ  ಮಾಡಿರುವ ಇಲ್ಲಸಲ್ಲದ ಸುಳ್ಳು ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು. ಕೇಂದ್ರ ಬಿಜೆಪಿ ಸರ್ಕಾರ ಬಹಿರಂಗ  ಕ್ಷಮೆ  ಕೇಳಬೇಕು.  ದೇಶದಲ್ಲಿ ಶಾಂತಿ ಮತ್ತು ಭದ್ರತೆ ಮತ್ತು ರಾಷ್ಟ್ರೀಯ ಏಕತೆಯನ್ನು ಕಾಪಾಡಿಕೊಳ್ಳಲು ಕಾನೂನಿನ ನಿಯಮವನ್ನು ಎತ್ತಿ ಹಿಡಿಯುವುದು ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ತನಿಖೆ ಮಾಡಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಅಲ್ಲಿರುವ ಬಿಜೆಪಿ ಸರ್ಕಾರ ಕೂಡಲೇ ವಿಸರ್ಜನೆ ಮಾಡಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಬಶೀರ್ ಅಹಮ್ಮದ್ ಬೇಪಾರಿ, ಎಲ್.ಡಿ ಮುಲ್ಲಾ, ಜಬ್ಬಾರ್ ಮೊಮೀನ್, ಪಜಲೋ ಮೌಲಾನಾ, ರಿಯಾಜ್ ಯಲಗಾರ, ರಾಜಾಕ್ ಆಹೇರಿ, ಮೌಲಾನ ಮಹಮ್ಮದ್ ಸಾಬ್, ಮೌಲಾನಾ ಅಯ್ಯುಬ ಸಾಹಬ, ಮೌಲಾನಾ ದಾವುದಸಾಬ, ಅಮೀನ ಅಲಾ ಬೇಪಾರಿ, ಮೌಲಾ ನದಾಫ್, ನಜೀರ್ ಕಲಕೇರಿ, ಬಾಬು ದೇವಣಗಾಂವ, ಮಮ್ಮದ್ ರಫೀಕ್ ಪಾನ್ ಪುರುಷ್, ಮೈಬೂಬ್ ತಾಂಬುಳಿ, ಬಂದೇ ನಮಾಜ್ ಹಳ್ಳಿ, ಫಯಾಜ್ ಯಲಗಾರ, ದಾದಾ ಬೇಪಾರಿ, ಅಕ್ಬರ್ ಭಾಗವಾನ್, ಹೀಗೆ ದೇವರಹಿಪ್ಪರಗಿ ಪಟ್ಟಣದ ಅಂಜುಮನ್ ಇಸ್ಲಾಂ ಎಲ್ಲಾ ಬಾಂಧವರು ಇನ್ನಿತರರಿದ್ದರು.

Related