ಕಾರ್ಯಕರ್ತರ ಮನವಿ

ಕಾರ್ಯಕರ್ತರ  ಮನವಿ

ಚಿಂಚೋಳಿ :ಪಟ್ಟಣದಲ್ಲಿ ಭಾರತ ಮುಕ್ತಿ ಮೋರ್ಚಾ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಘೋಷಣೆಗಳನ್ನು ಕೂಗುತ್ತಾ ಪುರಸಭೆಗೆ ಮುತ್ತಿಗೆ ಹಾಕಿ ಬುಧವಾರ ಕಾರ್ಯಕರ್ತರು ಪ್ರತಿಭಟನೆ ಮಾಡಲಾಯಿತು.
ಭಾರತ ಮುಕ್ತಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ ಮಾತನಾಡಿ, ಪುರಸಭೆಯ ಮುಖ್ಯಾಧಿಕಾರಿಗಳು ಹಗಲಲ್ಲಿ ನಿದ್ದೆ ಮಾಡುವರಾಗಿದ್ದಾರೆ, ಪಟ್ಟಣದ ವಾರ್ಡ್ಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಕೂಡ, ಸಮಸ್ಯೆಯ ಬಗ್ಗೆ ಸ್ಪಂದನೆ ನೀಡುತ್ತಿಲ್ಲ, ಚರಂಡಿ, ನೀರು, ಶೌಚಾಲಯ, ರಸ್ತೆ, ವಿದ್ಯುತ್, ಇದರ ಬಗ್ಗೆ ಕಾಳಜಿ ಇಲ್ಲದ ಮುಖ್ಯಾಧಿಕಾರಿ, ಏನಾದ್ರೂ ಕೇಳಿದರು ಸಿಬ್ಬಂದಿಗಳ ಕೊರತೆ ಎಂದು ಹೇಳುತ್ತಾರೆ.
ತಪ್ಪು ಮಾಡದ ಹೊರಗುತ್ತಿಗೆದಾರರು, ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ವಾರ್ಡ್ ಸಂಖ್ಯೆ 17. ರ ಆಶ್ರಯ ಕಾಲೋನಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕು, ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್ಗಳಲ್ಲಿ ಸಾರ್ವಜನಿಕ ಗ್ರಂಥಾಲಯ ತೆರೆಯಬೇಕು, ಚಿಂಚೋಳಿಯಿಂದ ಚಂದಾಪುರದ ಹನುಮಾನ್ ಟೆಂಪಲ್‌ವರೆಗೆ ತಡೆಗೋಡೆ ನಿರ್ಮಿಸಬೇಕು, ಪೌರ ಕಾರ್ಮಿಕರಿಗೆ ಸರಿಯಾಗಿ ವೇತನ ಪಾವತಿಸಬೇಕು, ಬೇಡಿಕೆಯ ಪತ್ರವನ್ನು ತಾಲ್ಲೂಕು ಗ್ರೇಡ್2 ತಹಶೀಲ್ದಾರ್ ವೆಂಕಟೇಶ ದುಗ್ಗನ್ ದಂಡಾಧಿಕಾರಿ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಮೇಶ್ ದೋಟಿಕೋಳ, ಗೋಪಾಲ್ ರಾಂಪುರೆ, ವಾಮನ್ ರಾವ್ ಕೊರವಿ ,ಪ್ರದೀಪ ಮಾಳಗಿ, ಮಲ್ಲಮ್ಮ, ಇಂದುಮತಿ ರೇಣುಕಾ, ಜಗದೇವಿ, ಮಾಲಾಶ್ರೀ ,ಪವಿತ್ರ, ಇನ್ನಿತರರಿದ್ದರು.

Related