ರಶ್ಮಿಕಾ-ವಿಜಯ್ ಫ್ಯಾನ್ಸ್ ಖುಷಿಪಡುವ ಸುದ್ದಿ

  • In Cinema
  • July 7, 2022
  • 209 Views
ರಶ್ಮಿಕಾ-ವಿಜಯ್ ಫ್ಯಾನ್ಸ್ ಖುಷಿಪಡುವ ಸುದ್ದಿ

ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿ ಆಗಿದ್ದಾರೆ. ಇಬ್ಬರ ಕೈಯಲ್ಲೂ ಹಲವು ಆಫರ್‌ಗಳಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಿನಿಮಾ ಮಾತ್ರವಲ್ಲದೇ ಕೆಲವು ವೈಯಕ್ತಿಕ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ. ನಟ ವಿಜಯ್ ದೇವರಕೊಂಡ ಜೊತೆ ಅವರಿಗೆ ಎಂಥ ಬಾಂಧವ್ಯ ಇದೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ ಬಳಿಕ ಅವರಿಬ್ಬರ ನಡುವೆ ರಿಯಲ್ ಲೈಫ್‌ನಲ್ಲಿಯೂ ಆಪ್ತತೆ ಹೆಚ್ಚಿತು. ಅನೇಕ ಬಾರಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಹಾಗಾಗಿ ಅವರ ಬಗ್ಗೆ ಹಲವುಗಾಸಿಪ್‌ಗಳು ಹರಿದಾಡುತ್ತವೆ.

ಈಗ ಈ ಜೋಡಿ ಬಗ್ಗೆ ಹೊಸ ನ್ಯೂಸ್ ಕೇಳಿಬಂದಿದೆ. ಮತ್ತೆ ಇವರಿಬ್ಬರನ್ನು ತೆರೆಮೇಲೆ ಒಂದಾಗಿಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಜನ ಗಣ ಮನ‘  ಚಿತ್ರದ ಇನ್‌ಸೈಡ್ ಮೂಲಗಳಿಂದ ಈ ವಿಷಯ ಲೀಕ್ ಆಗಿದೆ. ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಬೇಕು ಎಂದು ಕಸರತ್ತು ನಡೆಸುತ್ತಿದ್ದಾರೆ.

ಲೈಗರ್ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಬಳಿಕ ಅವರು ನಟಿಸಲಿರುವ ಜನ ಗಣ ಮನಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲೇ ಮೂಡಿಬರಲಿದೆ. ಆ ಚಿತ್ರದ ಒಂದು ವಿಶೇಷ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರನ್ನು ಒಂದಾಗಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರನ್ನು ತೆರೆ ಮೇಲೆ ಮತ್ತೊಮ್ಮೆ ಜೋಡಿಯಾಗಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಅಂಥ ಆಸೆ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಖುಷಿ ಆಗಿದೆ. ಆದರೆ ಚಿತ್ರತಂಡದಿಂದ ಈ ಮಾಹಿತಿ ಅಧಿಕೃತವಾಗಿ ಪ್ರಕಟವಾಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಲಿದ್ದಾರೆ. ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ.

೨೦೨೩ರ ಆಗಸ್ಟ್ನಲ್ಲಿ ಜನ ಗಣ ಮನರಿಲೀಸ್ ಆಗಲಿದೆ. ಚಿತ್ರರಂಗದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಖತ್ ಬ್ಯುಸಿ ಆಗಿದ್ದಾರೆ. ಇಬ್ಬರ ಕೈಯಲ್ಲೂ ಹಲವು ಆಫರ್‌ಗಳಿವೆ. ಬಾಲಿವುಡ್‌ನಲ್ಲಿ ರಶ್ಮಿಕಾ ನಟಿಸಿರುವ ಗುಡ್‌ಬೈ, ಮಿಷನ್ ಮಜ್ನು ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ದಕ್ಷಿಣ ಭಾರತದಲ್ಲೂ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ದಳಪತಿ ವಿಜಯ್ ಅವರಂತಹ ಸ್ಟಾರ್ ನಟರ ಸಿನಿಮಾಗಳು ರಶ್ಮಿಕಾ ಕೈ ಸೇರುತ್ತಿವೆ.

Related