ರಮ್ಯಾಕೃಷ್ಣ-ಕೃಷ್ಣವಂಶಿ ಡಿವೋರ್ಸ್..?

  • In Cinema
  • July 19, 2022
  • 274 Views
ರಮ್ಯಾಕೃಷ್ಣ-ಕೃಷ್ಣವಂಶಿ ಡಿವೋರ್ಸ್..?

ವಯಸ್ಸು 50 ದಾಟಿದ್ರು, ಬಹುಭಾಷಾ ನಟಿ ರಮ್ಯಾಕೃಷ್ಣ ಕ್ರೇಜ್ ಮಾತ್ರ ಕಿಂಚಿತ್ತು ಕಮ್ಮಿಯಾಗಿಲ್ಲ. ಇವತ್ತಿಗೂ ಈ ಚೆನ್ನೈ ಚೆಲುವೆಗಂತ್ಲೇ ನಿರ್ದೇಶಕರು ಹೊಸ ಹೊಸ ಪಾತ್ರಗಳನ್ನು ಬರೆಯುತ್ತಾರೆ. ಸದ್ಯ ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲೂ ಒಂದೊಳ್ಳೆ ಪಾತ್ರ ಮಾಡ್ತಿದ್ದಾರೆ.

ಸಿನಿಮಾ ಬಿಟ್ಟು ರಮ್ಯಾಕೃಷ್ಣ ಮ್ಯಾರೇಜ್ ಲೈಫ್ ಬಗ್ಗೆ ಹೇಳೋದಾದ್ರೆ, ಕೆಲ ವರ್ಷಗಳ ಹಿಂದೆ ಕೃಷ್ಣವಂಶಿ ಮತ್ತು ರಮ್ಯಾಕೃಷ್ಣ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ವೈಮನಸ್ಸಿನಿಂದ ಇಬ್ಬರೂ ದೂರಾಗೋಕೆ ಮನಸ್ಸು ಮಾಡಿದ್ದಾರೆ. ಡೈವೋರ್ಸ್ ತಗೊಳ್ಳೊಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ಇಬ್ಬರು ಪ್ರತಿಕ್ರಿಯಿಸೋ ಗೋಜಿಗೆ ಹೋಗಿರಲಿಲ್ಲ.

ಇದೀಗ ಸಂದರ್ಶವೊಂದಲ್ಲಿ ಈ ಬಗ್ಗೆ ರಮ್ಯಾಕೃಷ್ಣ ಪತಿ ನಿರ್ದೇಶಕ ಕೃಷ್ಣವಂಶಿ ಮಾತನಾಡಿದ್ದಾರೆ. ನಾಲ್ಕು ವರ್ಷಗಳ ನಂತ್ರ ನಿರ್ದೇಶಕ ಕೃಷ್ಣವಂಶಿ ‘ರಂಗಮಾರ್ತಾಂಡ’ ಅನ್ನೋ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಅವರು ಡಿವೋರ್ಸ್ ಗಾಸಿಪ್ ಬಗ್ಗೆ ಮಾತನಾಡಿದ್ದಾರೆ. ರಮ್ಯಾಕೃಷ್ಣ ಕರಿಯರ್ ಪೀಕ್ನಲ್ಲಿ ಇದ್ದಾಗ್ಲೇ ನಿರ್ದೇಶಕ ಕೃಷ್ಣವಂಶಿ ಜೊತೆ ಹಸೆಮಣೆ ಏರಿದ್ದರು.

ಇಬ್ಬರ ಪ್ರೀತಿಯ ಸಂಕೇತವಾಗಿ ಒಂದು ಮಗು ಕೂಡ ಇದೆ. ಗುಲಾಬಿ, ಖಡ್ಗಂ, ಚಂದಮಾಮ, ಗೋವಿಂದುಡು ಅಂದರಿವಾಡೆಲೇ ರೀತಿಯ ಸಿನಿಮಾಗಳನ್ನು ಕಟ್ಟಿಕೊಟ್ಟ ಕೃಷ್ಣವಂಶಿ ಸದ್ಯ ಒಂದೊಳ್ಳೆ ಬ್ರೇಕ್ಗಾಗಿ ಕಾಯ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕೃಷ್ಣವಂಶಿ ಸಿನಿಮಾಗಳು ಅಷ್ಟಾಗಿ ಸೌಂಡ್ ಮಾಡ್ತಿಲ್ಲ. ಈಗ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ.

Related