ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್

ಚೆನ್ನೈನಲ್ಲಿ ಮತ ಚಲಾಯಿಸಿದ ರಜನಿಕಾಂತ್

ಚೆನ್ನೈ: ದೇಶದಾದ್ಯಂತ ಇಂದಿನಿಂದ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಪ್ರಾರಂಭವಾಗಿದ್ದು ಚೆನ್ನೈನಲ್ಲಿ ಇಂದು ನಟ ರಜನಿಕಾಂತ್ ಅವರು ಮತದಾನ ಮಾಡಿದ್ದಾರೆ.

ಇನ್ನು ರಜನಿಕಾಂತ್ ಮತದಾನ ಮಾಡಲು ಬಂದ ವೇಳೆ ರಜನಿಯನ್ನು ಅಭಿಮಾನಿಗಳು ಮುತ್ತಿಕೊಂಡು ಸೆಲ್ಫಿಗೆ ಮುಗಿ ಬಿದ್ದಿದ್ದಾರೆ. ಇಂದು ಬೆಳಗ್ಗೆ ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ನಟನನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

ಟ್ವಿಟರ್​ನಲ್ಲಿ ಶೇರ್ ಮಾಡಲಾದ ವೀಡಿಯೊದಲ್ಲಿ, ರಜನಿಕಾಂತ್ ಮತದಾನ ಮಾಡಲು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ನಟ ಮತ ಚಲಾಯಿಸಿ ಬಂದ ನಂತರ ತನ್ನ ಶಾಯಿ ಗುರುತಿನ ಬೆರಳನ್ನು ತೋರಿಸಿದರು.

 

Related