ನವದೆಹಲಿ, ಫೆ. 14 : ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಲ್ (52 ಕೆಜಿ ವಿಭಾಗ) ನೂತನ “ಐಒಸಿ ಬಾಕ್ಸಿಂಗ್ ಟಾಸ್ಕ್ ಫೋರ್ಸ್’ ರ್ಯಾಂಕಿಂಗ್ನಲ್ಲಿ ವಿಶ್ವದ ನಂ.1 ಬಾಕ್ಸರ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ಬಾಕ್ಸರ್ ಓರ್ವ ಅಗ್ರಸ್ಥಾನಕ್ಕೆ ನೆಗೆದದ್ದು ಇದೇ ಮೊದಲು. 2009ರಲ್ಲಿ ಒಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು (72 ಕೆಜಿ ವಿಭಾಗ). 24ರ ಹರೆಯದ ಅಮಿತ್ ಪಂಘಲ್ ಒಟ್ಟು 420 ಅಂಕ ಹೊಂದಿದ್ದಾರೆ ಎಂದು ಇಂಟರ್ನ್ಯಾಶನಲ್ ಒಲಿಂಪಿಕ್ ಕಮಿಟಿಯ (ಐಒಸಿ) ಬಾಕ್ಸಿಂಗ್ ಟಾಸ್ಕ್ ಫೋರ್ಸ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.