ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡ ವಿಧಿಸಿದ ಪಿಎಸ್‌ಐ

ಹೆಲ್ಮೆಟ್ ಇಲ್ಲದ ಸವಾರರಿಗೆ ದಂಡ ವಿಧಿಸಿದ ಪಿಎಸ್‌ಐ

ಮುದ್ದೇಬಿಹಾಳ : ಸರ್ಕಾರದ ನಿಯಮದಂತೆ ಜನಸಾಮಾನ್ಯರು ಇನ್ನೂ ಮುಂದೆ ದ್ವಿಚಕ್ರ ವಾಹನವನ್ನು ಸವಾರಿ ಮಾಡುವ ಮುಂಚೆ, ತಲೆಗೆ ಹೆಲ್ಮೆಟ್ ಹಾಕಿಕೊಳ್ಳಬೇಕು, ದೇಹದ ಯಾವುದಾದರೂ ಅಂಗಗಳಿಗೆ ತೊಂದರೆಯಾದರೆ ಸರಿ ಪಡಿಸಿಕೊಳ್ಳಬಹುದು, ತಲೆಗೆ ಏನಾದರೂ  ಪೆಟ್ಟಾದರೆ  ಮನುಷ್ಯನ  ಜೀವನವೇ  ಹೋಗುತ್ತದೆ.  ಆದರಿಂದ  ಪ್ರತಿಯೊಬ್ಬರು

ಹೆಲ್ಮೆಟ್ ಧರಿಸುವಂತಾಗಬೇಕು ಎಂದು ಮುದ್ದೇಬಿಹಾಳ ಪೊಲೀಸ್ ಠಾಣಾ ಪಿಎಸ್‌ಆಯ್ ರೇಣುಕಾ ಜಕನೂರ ಹೇಳಿದರು.
ಪಟ್ಟಣದಲ್ಲಿ ಬಸ್ ನಿಲ್ದಾಣದ ಹತ್ತಿರ ಪೊಲೀಸ್ ಇಲಾಖೆಯಿಂದ ನಡೆದ ಹೆಲ್ಮೆಟ್ ಧರಿಸಿ ಜೀವ ರಕ್ಷಿಸಿಕೊಳ್ಳಿ ಜನಜಾಗೃತಿ ವೇಳೆ ಮಾತನಾಡಿದ ಅವರು, ಅಪಘಾತಗಳು ಯಾರಿಗೂ ಹೇಳಿ ಬರುವುದಿಲ್ಲಾ, ನಮ್ಮ ಜೀವನವನ್ನು ನಾವುಗಳು ಕಾಪಾಡಿಕೊಳ್ಳುವ ದೃಷ್ಠಿಯಿಂದ ಎಲ್ಲರೂ ಹೇಲ್ಮೇಟ್ ಹಾಕಿಕೊಂಡು ವಾಹನವನ್ನು ಚಲಾವಣೆ ಮಾಡುವಂತರಾಗಬೇಕು, ಇಂದಿನಿಂದ ದ್ವೀಚಕ್ರ ವಾಹನ ಸವಾರರೂ ಹೆಲ್ಮೆಟ್ ಹಾಕದೆ ತೀರುಗಾಡಿದರೆ ಅಂತಹವರಿಗೆ ನಿಯಮದ ಪ್ರಕಾರದ ದಂಡವನ್ನು ವಿಧಿಸಲಾಗುತ್ತದೆ ಎಂದರು.

ನಂತರ ಸಿಪಿಐ ಹಾಗೂ ಪಿಎಸ್‌ಐ ಜೊತೆಗೂಡಿ ಸಾರ್ವಜನಿಕರಿಗೆ ಹೆಲ್ಮೆಟ್ ಬಗ್ಗೆ ತಿಳಿವಳಿಕೆ ಹೇಳುತ್ತಾ, ಸ್ವಯಂ ಪ್ರೇರಿತವಾಗಿ ಇಲಾಖೆಯಿಂದ ತಗೆದುಕೊಂಡು ಬಂದಂತಹ ಹೇಲ್ಮೇಟ್ ಗಳನ್ನು ರಿಯಾಯಿತಿ ದರದಲ್ಲಿ ಹಣವನ್ನು ತಗೆದುಕೊಂಡು ಕೊಡಲಾಯಿತು. ಇದರಿಂದಾಗಿ ಸಾಕಷ್ಟು ವಾಹನ ಸವಾರರೂ ಮುಜುಗುರಕ್ಕೆ ಒಳಗಾದರೂ ಪೊಲೀಸ್ ಇಲಾಖೆಯ ಹೇಳಿಕೆಯಂತೆ ಹೇಲ್ಮೇಟ್ ಖರೀದಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋಡೆ, ದೀಪಾ ವೈ.ಜೆ, ಎಎಸ್‌ಆಯ್ ಎಚ್.ಬಿ ಸುತಗುಂಡರ, ಸಿಬ್ಬದ್ದಿಗಳಾದ ಎಸ್.ಪಿ ಜಾದವ್, ಉಮೇಶ್ ಚುಂಚನೂರ, ಪಾಂಡುರAಗ ಪಾಟೀಲ್, ಶಿವಾನಂದ ಮ್ಯಾಗೇರಿ, ಮಲ್ಲನಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಸಲೀಮ್ ಹತ್ತರಕಿಹಾಳ, ಎಸ್‌ಜಿ ಬನ್ನೆಟ್ಟಿ, ವಿರೇಶ್ ಹಾಲಗಂಗಾಧರಮಠ, ಶಿವಾನಂದ ಮಾಶಟ್ಟಿ, ಚಂದ್ರಶೇಖರ ಬಂಗಿ, ಎಮ್‌ಎನ್ ಬುಳ್ಳಾ, ಎಮ್.ಬಿ ಮುಳವಾಡ ಇನ್ನಿತರರಿದ್ದರು.

Related