ಕಾಂಗ್ರೆಸ್‌ಗೆ ಜನರ ನೆಮ್ಮದಿಗಿಂತ ವೋಟ್‌ ಬ್ಯಾಂಕ್ ರಕ್ಷಣೆಯೇ ಮುಖ್ಯ: ಸಿಟಿ ರವಿ

ಕಾಂಗ್ರೆಸ್‌ಗೆ ಜನರ ನೆಮ್ಮದಿಗಿಂತ ವೋಟ್‌ ಬ್ಯಾಂಕ್ ರಕ್ಷಣೆಯೇ ಮುಖ್ಯ: ಸಿಟಿ ರವಿ

ಮಂಡ್ಯ:  ಕರ್ನಾಟಕ ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆಗೆ ಕೇವಲ ಎರಡು ದಿನಗಳ ಬಾಕಿ ಇದ್ದು ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷದ ನಾಯಕರುಗಳು ಆರೋಪಗಳ ಆರೋಪ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ಪಕ್ಷದ ಮೇಲೆ ಆಕ್ರೋಶ ಹೊರ ಹಾಕ್ಕಿದ್ದಾರೆ.

ನಗರದಲ್ಲಿದ್ದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಯ ಟ್ರೈಲರ್ ಬಿಡುಗಡೆ ಮಾಡಿದರೆ, ಕಾಂಗ್ರೆಸ್ ತಾಲಿಬಾನ್ ಮಾದರಿ ಆಡಳಿತದ ಟ್ರೈಲರ್ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್‌ಗೆ ರಾಜ್ಯದ ಜನರ ನೆಮ್ಮದಿಗಿಂತ ವೋಟ್‌ ಬ್ಯಾಂಕ್ ರಕ್ಷಣೆಯೇ ಮುಖ್ಯವಾಗಿದೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳುವ ಸಿಎಂ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಶಾಂತಿ ಎಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಹನುಮಾನ್‌ ಚಾಲೀಸ ಹೇಳಿದವರ ಮೇಲೆ ಹಲ್ಲೆ, ಕೇಸರಿ ಶಾಲು ಧರಿಸಿದ ಮಾತ್ರಕ್ಕೆ ಕೊಲೆ ಮಾಡುವುದು, ಲವ್ ಜಿಹಾದ್‌ಗೆ ಒಪ್ಪದ ಹೆಣ್ಣು ಮಕ್ಕಳ ಹತ್ಯೆ, ಕೆಫೆಯಲ್ಲಿ ಬಾಂಬ್ ಇಡುವುದು ಸೇರಿದಂತೆ ಹಲವಾರು ದೇಶ ವಿರೋಧಿ ಚಟುವಟಿಕೆ ನಡೆಸುವವರನ್ನು ಕಾಂಗ್ರೆಸ್ ರಕ್ಷಣೆ ಮಾಡುತ್ತಿದೆ. ಇವೆಲ್ಲವೂ ತಾಲಿಬಾನ್ ಸರ್ಕಾರದ ಮಾದರಿಯೇ ಎಂದು ಹೇಳಿದರು.

ತಮ್ಮದೇ ಪಕ್ಷದ ಶಾಸಕ ಹಾಗೂ ಕಾರ್ಪೋರೇಟರ್ ಮಗಳ ಬದುಕಿಗೆ ರಕ್ಷಣೆ ಕೊಡಲಾಗದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡುತ್ತದೆ. ಇವರನ್ನು ಹೀಗೆಯೇ ಬಿಟ್ಟರೆ ಜನರಿಗೆ ಚಟ್ಟದ ಭಾಗ್ಯ ಸಿಗಲಿದೆ ಎಂದು ಆತಂಕದಿಂದ ನುಡಿದರು.

 

Related