ಬಡ ಕೂಲಿಕಾರನ ಮಗಳ ಸಾಧನೆ

  • In State
  • July 15, 2020
  • 404 Views
 ಬಡ ಕೂಲಿಕಾರನ ಮಗಳ ಸಾಧನೆ

ಮೂಡಲಗಿ: ತಾಲ್ಲೂಕಿನ ಮುನ್ಯಾಳ ಗ್ರಾಮದ ಬಡ ಕೂಲಿಕಾರನ ಮಗಳು ತನುಜಾ ರಮೇಶ ಐಹೊಳೆ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ 564/600(ಶೇ.94) ಅಂಕ ಪಡೆದು ಹುಬ್ಬೇರಿಸುವಂತ ಸಾಧನೆ ಮಾಡಿದ್ದಾಳೆ.

ತನುಜಾರವರ ತಂದೆ ಬಡ ಕೂಲಿಕಾರ. ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯ ತಂದೆ ರಮೇಶ ಐಹೊಳೆ, ಮಗಳಿಗೆ ಕಷ್ಟಪಟ್ಟು ಓದಿಸಿದ್ದು ಸಾರ್ಥಕವಾಯಿತು. ಮುಂದೆ ಮೆಡಿಕಲ್ ಮಾಡುವ ಗುರಿ ಹೊಂದಿದ್ದಾಳೆ. ಹಣಕಾಸಿನ ಸಮಸ್ಯೆ ಅಡ್ಡಿಯಾಗಿದೆ. ಪುತ್ರಿಯ ಉನ್ನತ ಶಿಕ್ಷಣದ ಆಸೆ ಈಡೇರುತ್ತೊ ಇಲ್ಲವೋ ಎಂಬ ಖುಷಿಯ ನಡುವೆ ನೋವು ಹಂಚಿಕೊಂಡರು.
ಇಂತಹ ಪ್ರತಿಭೆಗಳಗೆ ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಗಳು ಹಣಕಾಸಿನ ನೆರವು ನೀಡಿ ಸಹಕರಿಸಬೇಕಾಗಿ “ಪ್ರಜಾವಾಹಿನಿ” ಆಶಿಸುತ್ತದೆ.

Related