ಕೆರೆಯಲ್ಲಿ ದನ ಮಾಂಸ ತ್ಯಾಜ್ಯ; ಸ್ಥಳೀಯರ ಆಕ್ರೋಶ

  • In State
  • August 3, 2020
  • 513 Views
ಕೆರೆಯಲ್ಲಿ ದನ ಮಾಂಸ ತ್ಯಾಜ್ಯ; ಸ್ಥಳೀಯರ ಆಕ್ರೋಶ

ಮುಂಡಗೋಡ:ಪಟ್ಟಣದ ಮಾರಿಕಾಂಬಾ ದೇವಾಲಯ ಬಳಿ ಇರುವ ಅಮ್ಮಾಜಿ ಕೆರೆಯಲ್ಲಿ ಕಿಡಿಗೇಡಿಗಳು ದನದ ಮಾಂಸದ ತ್ಯಾಜ್ಯವನ್ನು ಎಸೆದು ಕಲುಷಿತಗೊಳಿಸಿದ ಹಿನ್ನೆಲೆ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನವರಾತ್ರಿ, ಯುಗಾದಿ ಸೇರಿದಂತೆ ಎಲ್ಲ ಹಬ್ಬಕ್ಕೆ ಗ್ರಾಮದೇವಿ ಶ್ರೀ ಮಾರಿಕಾಂಬಾ ದೇವಾಲಯದ ವತಿಯಿಂದ ಕೆರೆಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ಸುತ್ತಮುತ್ತ ಪ್ರದೇಶದ ನೂರಾರು ಜಾನುವಾರುಗಳು ಕೆರೆಯ ನೀರು ಕುಡಿಯುತ್ತವೆ. ಈ ನಡುವೆ ಕಿಡಿಗೇಡಿಗಳು ಗೋಮಾಂಸದ ತ್ಯಾಜ್ಯವನ್ನು ಕೆರೆಗೆ ತಂದು ಎಸೆಯುವ ಮೂಲಕ ಅಪಮಾನ ಮಾಡಿರುವುದು ತೀವ್ರ ನೋವಾಗಿದ್ದು, ಇದನ್ನು ಖಂಡಿಸುತ್ತೇವೆ ಎಂದು ಅಸಮಾಧಾನ ಹೊರಹಾಕಿದರು.

ದೇವಿಯ ಹೆಸರಿನಿಂದಲೇ ಪ್ರಸಿದ್ದಿಯಾಗಿರುವ ಕೆರೆಯನ್ನು ಕಲುಷಿತಗೊಳಿಸಲಾಗಿದೆ. ಗೋಮಾಂಸ ವ್ಯಾಪಾರಸ್ಥರೇ ಇಂತಹ ಕೆಲಸ ಮಾಡಿದ್ದಾರೆ. ಹಾಗಾಗಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ಮುಂಡಗೋಡ ಪಿ.ಎಸ್.ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ಪರಿಶೀಲಿಸಿದರು.

ವಿಜಯ ದಶಮಿಯಂದು ಅಮ್ಮಾಜಿಕೆರೆಗೆ ಪೂಜೆ ಸಲ್ಲಿಸುವ ಮೂಲಕ ಹಬ್ಬ ಆಚರಿಸಲಾಗುತ್ತದೆ. ಸಾರ್ವಜನಿಕರ ಮನಸ್ಸಿಗೆ ನೋವುಂಟು ಮಾಡುವ ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು

Related