2020 ನವೆಂಬರ್ ಹೊತ್ತಿನಲ್ಲಿ ಚುನಾವಣೆ ನಿಗಧಿ ಆಗುವ ಸಾಧ್ಯತೆ

2020 ನವೆಂಬರ್ ಹೊತ್ತಿನಲ್ಲಿ ಚುನಾವಣೆ ನಿಗಧಿ ಆಗುವ ಸಾಧ್ಯತೆ

ಇಂಡಿ: ಗ್ರಾಮ ಪಂಚಾಯತಿ ಆಡಳಿತ ವ್ಯವಸ್ಥೆ ಮೇಲೆ ಕೊರೋನಾ ಪರಿಣಾಮ ಬೀರಿದೆ. ಮೇ, ತಿಂಗಳ ಅಂತ್ಯಕ್ಕೆ ಗ್ರಾಪಂ ಸದಸ್ಯರ ಅಧಿಕಾರ ಅವಧಿ ಮುಕ್ತಾಯ ಆಗಲಿದೆ ಎಂದು ಚುನಾವಣೆ ನಡೆಸುವ ಸ್ಥಿತಿ ಸದ್ಯಕ್ಕಿಲ.್ಲ ಹೀಗಾಗಿ ಸುಗ್ರಿವಾಜ್ಞೆ ಮೂಲಕ ಪಂಚಾಯತಿ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರು ಅಧಿಕಾರದ ಅವಧಿ ವಿಸ್ತರಿಸಬೇಕು ಎಂಬ ಬೇಡಿಕೆಗಳು ಇದೀಗ ತಾಲೂಕಿನಾದ್ಯಾಂತ ಪ್ರಬಲಗೊಳ್ಳುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧ ಹೋರಾಡಲು ಗ್ರಾಮ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆ ಗೊಂಡಿದೆ, ಇದಕ್ಕೆ ಗ್ರಾಪಂ ಉಪಾಧ್ಯಕ್ಷರು, ಇಬ್ಬರು ಸದಸ್ಯರು, ಪಿಡಿಓ, ಆರೋಗ್ಯ ಸಹಾಯಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸದಸ್ಯರಾಗಿದ್ದು, ಕೊರೋನಾ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರತಿ ಸೋಮವಾರ, ಗುರುವಾರ ಸಭೆ ನಡೆಸಿ ಕೊರೋನಾ ವಿರುದ್ಧ ಸಮರ ಸಾರಲಾಗುತ್ತಿದೆ.
ಆದರೆ ಗ್ರಾಪಂ ಸದಸ್ಯರ ಅಧಿಕಾರ ಅವಧಿ ಮುಗಿದರೆ ಈ ಟಾಸ್ಕ್ಫೋರ್ಸ್ ನಿಷ್ಕಿçÃಯಗೊಳ್ಳಲಿದ್ದು, ಗ್ರಾಮೀಣ ಸಮಸ್ಯೆಗೆ ಸಿಲುಕಲಿದ್ದಾರೆ ಎಂಬುದು ಪ್ರಜ್ಞರ ಅಭಿಪ್ರಾಯವನ್ನು 2020 ನವೆಂಬರ್ ಹೊತ್ತಿನಲ್ಲಿ ಚುನಾವಣೆ ನಿಗಧಿ ಆಗುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಗ್ರಾಪಂ ಹಾಲಿ ಆಡಳಿತ ಮಂಡಳಿ ಅಧಿಕಾರ ಅವಧಿ ವಿಸ್ತರಣೆ ಮಾಡಿ ಎಂದು ಹಲವಾರು ಗ್ರಾಪಂ ಅಧ್ಯಕ್ಷರು ಸೇರಿದಂತೆ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಕುರಿತು ವಿಜಯಪುರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಚರ್ಚೆಗಳು ನಡೆದಿವೆ. ಆದರೆ ಸದಸ್ಯರ ಅಧಿಕಾರ ಅವಧಿ ವಿಸ್ತರಿಸಲು ನಮಗೆ ಅಧಿಕಾರ ಇಲ್ಲ ಎಂದು ರ‍್ಕಾರ ಸ್ಪಷ್ಟ ಪಡಿಸಿದೆ. ಇದಕ್ಕೆ ತೀರ್ವ ವಿರೋಧ ವ್ಯಕ್ತಪಡಿಸುವ ಪ್ರತಿಪಕ್ಷ ನಾಯಕರು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತನ್ನಿ ಎಂದು ಆಗ್ರಹಿಸುತ್ತಿದ್ದಾರೆ. ಈ ಬೆಳವಣೆಗೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಗಳಿವೆ.

Related