ಪೆಟ್ರೋಲ್ ಬೆಲೆ ಏರಿಕೆ – ಕಾಂಗ್ರೆಸ್ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ – ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್, ಸಿಲೆಂಡರ್ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೀವನವನ್ನು ದುಸ್ಥಿತಿಯತ್ತದೂಡುತ್ತಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ‘ಎತ್ತಿನಗಾಡಿ ಚಲೋ’ ಎಂದು ವಿಧಾನಸೌಧದ ಬಳಿ ಪ್ರತಿಭಟನೆ ಮಾಡಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸದಾಶಿವನಗರ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ತೆರಳಿ, ಅದೇ ರೀತಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುಮಾರಪಾರ್ಕ್ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ತೆರಳಲಿದ್ದಾರೆ. ಎತ್ತಿನ ಬಂಡಿಯಲ್ಲಿ ಹೊರಡುವ ಮುನ್ನ ಸುದ್ದಿಗಾರರ ಜೊತೆ ಡಿ.ಕೆ ಶಿವಕುಮಾರ್ ರವರು ಮಾತನಾಡಿದರು. ನಾನು ದೇಶದ ಪರ ಕೆಲಸ ಮಾಡುತ್ತಿದ್ದೇನೆ, ಪೆಟ್ರೋಲ್, ಸಿಲೆಂಡರ್ ದರ ಬಗ್ಗೆ ಬೆಲೆ ಏರಿಕೆಯು ಪ್ರತಿ ಲೀಟರ್ ಗೆ 25 ರೂ.ಗಳು ಕಡಿಮೆ ಮಾಡಿ 75 ರೂ ಗಳಿಗೆ ಇಳಿಸಬೇಕು ಎಂದು ಅಕ್ರೋಶ ಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಖಂಡರುಗಳಾದ ಎಸ್.ಆರ್. ಪಾಟೀಲ, ಶಾಸಕ ಎಂ.ಬಿ. ಪಾಟೀಲ್ ಪ್ರಕಾಶ್ ಸಾಥ್ ನೀಡಿದರು.

Related