ಪಡಿತರದಾರರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಿ

ಪಡಿತರದಾರರಿಗೆ ಅನ್ಯಾಯವಾಗದಂತೆ ಕರ್ತವ್ಯ ನಿರ್ವಹಿಸಿ

ನಾಗಮಂಗಲ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಭಾನುವಾರ ಸರ್ಕಾರಿ ಪಡಿತರ ವಿತರಕರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ಅನ್ಯಾಯವಾಗದಂತೆ ಸರ್ಕಾರಿ ಸೌಲಭ್ಯ ನೀಡುವ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ತಾಲ್ಲೂಕು ವ್ಯವಸಾಯೋತ್ಪನ್ನ ಉತ್ಪಾದಕರ ಮಾರುಕಟ್ಟೆ ಸಮಿತಿ ಅಧ್ಯಕ್ಷ ತಿಮ್ಮಪ್ಪ ಅಭಿಪ್ರಾಯ ಪಟ್ಟರು.

ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಇಂದಿನ ಪರಿಸ್ಥಿತಿಯಲ್ಲಿ ಮೂರು ಕಾಸಿನ ಆದಾಯವಿಲ್ಲ. ಆದಾಯವಾಗುತ್ತಿದ್ದಂತಹ ಈ ಹಿಂದಿನ ದಿನಗಳಲ್ಲಿ ಯಾವುದೇ ಸಂಘ ಮಾಡಿಕೊಳ್ಳದೆ ಇಂದು ಮಾಡುತ್ತಿರುವುದು ಬೇಸರದ ಸಂಗತಿ. ಪಡಿತರದಾರರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ನಾಗರೀಕರಿಗೆ ತಲುಪಿಸುವ ಕೆಲಸ ತಮ್ಮದಾಗಬೇಕು. ಈ ಹಿಂದೆ ಸ್ವಯಂಘೋಷಿತ ರಾಜ್ಯಾಧ್ಯಕ್ಷರು ಎಂದು ಓಡಾಡುತ್ತಿದ್ದವರು ಸಂಘದ ಕೆಲಸಗಳನ್ನು ತಮ್ಮ ಮನೆ ವಿಳಾಸಕ್ಕೆ ಸೀಮಿತವಾಗಿಸಿಕೊಂಡು ಎಲ್ಲಾ ವ್ಯವಹಾರ ನಡೆಸುತ್ತಿದ್ದರು.

ಇದುವರೆಗೂ ವೈಯಕ್ತಿಕ ಅಭಿವೃದ್ಧಿಗೆ ಸೀಮಿತವಾಗಿದ್ದ ಸಂಘದ ಕಾರ್ಯ ಇನ್ನಾದರೂ ಸಾರ್ವಜನಿಕ ಸೇವೆಗೆ ಸೀಮಿತವಾಗಲಿ. ಯಾರೋ ಒಬ್ಬರ ವೈಯಕ್ತಿಕ ದ್ವೇಷಕ್ಕೆ ಮಾತ್ರ ಸಂಘ ಸೀಮಿತವಾಗಿರದೆ. ಪಡಿತರದಾರರಿಗೆ ನ್ಯಾಯ ಒದಗಿಸುವುದರ ಜೊತೆಗೆ ಅಂಗಡಿ ಮಾಲೀಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಿ ಎಂದರು.

ಈ ಸಂದರ್ಭ ರಾಜ್ಯಾಧ್ಯಕ್ಷ ಶಿವಾನಂದಪ್ಪ, ತಾಲೂಕು ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಮರಿಸ್ವಾಮಿ, ತೆಂಗಿನಭಾಗ ನಾಗರಾಜು, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ ಇದ್ದರು.

Related