ಹನಿ ನೀರಾವರಿ ಪದ್ದತಿಯಲ್ಲಿ ಶೇಂಗಾ ಬೆಳೆ

ಹನಿ ನೀರಾವರಿ ಪದ್ದತಿಯಲ್ಲಿ ಶೇಂಗಾ ಬೆಳೆ

ಪಾವಗಡ: ಮಳೆಯ ಕೊರತೆಯಿಂದಾಗಿ ಮತ್ತು ನಿರಂತರ ಬೆಳೆ ನಷ್ಟಕ್ಕೆ ಒಳಗಾಗುತ್ತಿರುವ ತಾಲ್ಲೂಕಿನ ರೈತ ಕೃಷಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಶೇಂಗಾ ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ರೈತರನ್ನು ಕಾಣಬಹುದಾಗಿದೆ.
ತಾಲೂಕಿನಲ್ಲಿ ತುಂತರು ನೀರಾವರಿ ಕ್ರಮದಿಂದ ಶೇಂಗಾವನ್ನು ಬೆಳೆಯುತ್ತಿರುವುದನ್ನು ಕಂಡಿದ್ದೇವೆ ಆದರೆ ಕೊಂಡೇತಿಮ್ಮನಹಳ್ಳಿಯ ಹೆಂಜಾರಪ್ಪ ಎಂಬುವರು ತಮ್ಮ ಜಮೀನಲ್ಲಿ ಹನಿನೀರಾವರಿ ಮೂಲಕ ಶೇಂಗಾ ಬೆಳೆಯುತ್ತಿರುವ ಪ್ರಯೋಗನ್ನು ಮಾಡಿರುವುದನ್ನು ಕಾಣಬಹುದಾಗಿದೆ.
ಟಮೇಟೋ ಬೆಳೆ ಬೆಳೆಯಲು ಮಾಡಿದ್ದ ಬದುಗಳಲ್ಲಿ ಶೇಂಗಾವನ್ನು ಬೆಳೆಯನ್ನು ಬೆಳೆಯುತ್ತಿದ್ದು 40ದಿನಗಳ ಬೆಳೆ ಸೊಗಸಾಗಿ ಬೆಳೆದು ನಿಂತಿದೆ ಮಳೆಗಾಗಿ ಕಾಯದೆ ಹನಿನೀರಾವರಿ ಮೂಲಕ ನೀರು ಹಾಯಿಸಲಾಗಿದ್ದು ಬದುಗಳ ಮದ್ಯೆ ಇರುವ ಕಳೆ ತೆಗೆಯುವುದು ದೊಡ್ಡ ಸಮಸ್ಯೆ ಎನ್ನುತ್ತಾರೆ.
ಬೀಜಗಳನ್ನು ಬದುಗಳ ಮೇಲೆ ಕೈಯಿಂದ ಹಾಕಲಾಗಿದ್ದು ಬೀಜದಿಂದ ಬೀಜಕ್ಕೆ ಅಂತವನ್ನು ನೀಡಲಾಗಿಲ್ಲಾ ಒತ್ತಾಗಿ ಹಾಕಲಾಗಿದೆ. ಗಿಡಗಳು ಬೇರು ಬಿಡಲು ಬದುಗಳು ಸಡಿಲವಾಗಿ ಇರುವುದರಿಂದ ಗಿಡಗಳು ಸೊಗಸಾಗಿ ವೇಗವಾಗಿ ಬೆಳೆಯುತ್ತಿವೆ ಇದೇ ರೀತಿ ಕಾಯಿ ಕಚ್ಚಿದರೆ ಇಳುವರಿ ನಿರೀಕ್ಷಿಸಬಹುದಾಗಿದೆ ಇಂತಹ ಪದ್ದತಿಯಿಂದ ಕಡಿಮೆ ಬೀಜದಿಂದ ಹೆಚ್ಚಿನ ಇಳುವರಿ ಗಳಿಸುವ ಪದ್ದತಿ ಆಗಲಿದೆ ನೀರು ಮತ್ತು ಬೀಜದ ಉಳಿತಾಯ ವಾಗಲಿದೆ ಕಳೆ ಕೀಳುವ ಕೆಲಸವು ಕಡಿಮೆ ಎನ್ನಬಹುದು ಎನ್ನುತ್ತಾರೆ ತೋಟವನ್ನು ನೋಡಿಕೊಳ್ಳುವ ಈರಜ್ಜಿ. ಇದೇ ಮೊದಲ ಬಾರಿಗೆ ಈ ರೀತಿ ಬೆಳೆಯುತ್ತಿದ್ದು ಇಳುವರಿಯನ್ನು ಗಮನಿಸಬೇಕಿದೆ ಎನ್ನುತ್ತಾರೆ.

Related