ನಾಲ್ಕು ಹೋಬಳಿಯಲ್ಲಿ ಪಿಂಚಣಿ ಮಂಜೂರಾತಿ

ನಾಲ್ಕು ಹೋಬಳಿಯಲ್ಲಿ ಪಿಂಚಣಿ ಮಂಜೂರಾತಿ

ದೇವದುರ್ಗ : ಜಿಲ್ಲಾಧಿಕಾರಿ ಮತ್ತು ಸಹಾಯಕ ಆಯುಕ್ತರ ನಿರ್ದೇಶನದಂತೆ ಪ್ರತಿ ತಿಂಗಳು ಎರಡನೇ ವಾರ ಮತ್ತು ನಾಲ್ಕನೆಯ ಬುಧವಾರ ದಂದು ಪಿಂಚಣಿ ಆಂದೋಲನ ಹಮ್ಮಿಕೊಂಡಿದ್ದು, ಬುಧವಾರ ಅರವತ್ತೇಳು ಸ್ವೀಕೃತಿ ಅರ್ಜಿಗಳನ್ನು ಮಾನ್ಯಮಾಡಿ ಅದೇಶ ಪತ್ರಗಳನ್ನು ನೀಡಲಾಗಿದೆ ಎಂದು ತಹಶೀಲ್ದಾರ ಶ್ರೀನಿವಾಸ ಚಾಪೆಲ್ ತಿಳಿಸಿದ್ದಾರೆ.
ತಾಲೂಕಿನ ವ್ಯಾಪ್ತಿಯ ಅರಕೇರಾ ಹೋಬಳಿಯ ಮರಕಂದಿನ್ನಿ ಓಎಪಿ -19, ಎಸ್‌ಎಸ್‌ವೈ 4 ಜಿಡಬ್ಲ್ಯೂಪಿ 3 ಹಾಗೂ ಜಾಲಹಳ್ಳಿ ಹೋಬಳಿ ಹೇರುಂಡಿ ಓಎಪಿ 01, ಎಸ್‌ಎಸ್‌ವೈ 03, ಜಿಡಬ್ಲ್ಯೂಪಿ 01 ಮತ್ತು ಗಬ್ಬೂರು ಹೋಬಳಿಯ ಗಬ್ಬೂರು ಓಎಪಿ 04, ಎಸ್‌ಎಸ್‌ವೈ 14, ಜಿಡಬ್ಲ್ಯೂಪಿ 06 ಹಾಗೂ ದೇವದುರ್ಗ ಹೋಬಳಿಯ ನಿಲವಂಜಿ ಓಎಪಿ 05, ಎಸ್‌ಎಸ್‌ವೈ 04, ಜಿಡಬ್ಲ್ಯೂಪಿ 01 ಸೇರಿದಂತೆ ತಾಲೂಕಿನಲ್ಲಿ ಒಟ್ಟಾರೆ 67 ಅರ್ಜಿಗಳು ಬಂದಿದ್ದವು. ಎಲ್ಲಾ 67 ಅರ್ಜಿಗಳಿಗೆ ಪಿಂಚಣಿ ಅದೇಶ ನೀಡಲಾಗಿದೆ ಎಂದು ತಿಳಿಸಿದರು.

Related