ಕಾಲೇಜಿನಲ್ಲಿ ಒಂದು ಲಕ್ಷ ಕೊರೊನಾ ಪರೀಕ್ಷೆ

ಕಾಲೇಜಿನಲ್ಲಿ ಒಂದು ಲಕ್ಷ ಕೊರೊನಾ ಪರೀಕ್ಷೆ

ಮೈಸೂರು : ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಇದುವರೆಗೂ 1 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಈ ಕುರಿತು ಮಾತನಾಡಿದ ಅವರು, ಸಂಸ್ತೆಯ ಮೈಕ್ರೊಬಯಾಲಜಿ ಲ್ಯಾಬ್‌ನಲ್ಲಿ ಅ.20ರವರೆಗೆ ಜಿಲ್ಲೆಯ 89,589 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ. ಸಿ.ಪಿ ನಂಜರಾಜ ಮಾಹಿತಿ ನೀಡಿದರು.

ಹೊರ ಜಿಲ್ಲೆಯಿಂದ ಬಂದ 11,024 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟು 1,00,613 ಪರೀಕ್ಷೆಗಳನ್ನು ಈ ಸಂಸ್ಥೆಯಲ್ಲೇ ಕೈಗೊಳ್ಳಲಾಗಿದೆ ಎಂದು ಮೈಕ್ರೋ ಬಯಾಲಜಿ ನೋಡೆಲ್ ಅಧಿಕಾರಿ ಡಾ.ಬಿ.ಅಮೃತಾ ಕುಮಾರಿ ಅವರು ತಿಳಿಸಿದ್ದಾರೆ.

Related