ಹುಲಿ ಉಗುರು ಧರಿಸುವ ಕುರಿತು ತಾರತಮ್ಯ ಕ್ರಮ ಬೇಡಾ: ಮಹೇಶ ಟೆಂಗಿನಕಾಯಿ

ಹುಲಿ ಉಗುರು ಧರಿಸುವ ಕುರಿತು ತಾರತಮ್ಯ ಕ್ರಮ ಬೇಡಾ: ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಕನ್ನಡ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿರುವಂತಹ ವರ್ತೂರು ಸಂತೋಷ್ ಬಳಿ ಇದ್ದಂತಹ ಹುಲಿ ಉಗುರಿನ ಪೆಂಡೆಂಟ್ ಈಗಾಗಲೇ ಭಾರಿ ಸದ್ದು ಮಾಡಿದ್ದು, ರಾಜಕೀಯ ವ್ಯಕ್ತಿಗಳು ಮತ್ತು ಸಿನಿಮಾರಂಗದ ವ್ಯಕ್ತಿಗಳು ಇಂತಹ ಹುಲಿ ಅವುಗಳನ್ನು ಧರಿಸುವುದು ಸರ್ಮೇಸಾಮಾನ್ಯವಾಗಿದೆ..

ಇನ್ನು ರಾಜ್ಯದಲ್ಲಿ ಹುಲಿ ಉಗುರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಮಹೇಶ್ ತೆಂಗಿನಕಾಯಿಯವರು, ರಾಜಕಾರಣಿಗಳು ಸೇರಿದಂತೆ ಅನೇಕರು ಹುಲಿ ಉಗುರು ಧರಿಸುವ ಕುರಿತು ತಾರತಮ್ಯ ಕ್ರಮ ಬೇಡಾ. ಎಷ್ಟು ಮಂದಿ ರಾಜಕಾರಣಿಗಳ ಕೊರಳಲ್ಲಿ ಹುಲಿ ಉಗುರಿಲ್ಲ? ಹೇಳಿ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ಸಾಕಷ್ಟು ಜನರ ಕೊರಳಲ್ಲಿವೆ. ಯಾವತ್ತಾದ್ರೂ ನೋಡಿದಿರಾ ಮಾಡೋದಾದ್ರೆ ಎಲ್ಲರ ಬಗ್ಗೆನೂ ವಿಚಾರಣೆ ಆಗಬೇಕು ಯಾರಿಗೂ ಕೂಡ ಅನ್ಯಾಯ ಆಗಬಾರದು. ಎಲ್ಲರಿಗೂ ನ್ಯಾಯ ಸಿಗುವ ಕೆಲಸ ಆಗಬೇಕು.

ಸರ್ಕಾರ ಅದರ ಬಗ್ಗೆ ಏನು ತೀರ್ಮಾನ ತೊಗೊಳ್ತಾರೆ ಅನ್ನೋದನ್ನ ನೋಡಬೇಕು ಇದು ಇವತ್ತಿಂದಲ್ಲ ಅದು ಒರಿಜಿನಲ್ಲಾ, ಡುಬ್ಲಿಕೇಟ್ ಅವರೇ ಹೇಳಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆ ಅದರ ಬಗ್ಗೆ ಗಮನ ಹರಿಸಬೇಕು. ಕಾರಣ ಯಾರೋ ಒಬ್ಬರು ಹಿಡಿದ್ರಿ ಇನ್ನೊಬ್ಬರನ್ನ ಬಿಟ್ರಿ ಅನ್ನೋ ಹಾಗೆ ಆಗಬಾರದು ಇಷ್ಟು ವರ್ಷ ನೀವು ಮಲಗಿ ಈಗ ಅದನ್ನು ಮಾಡ್ತಾ ಇರೋದು ದೊಡ್ಡ ವಿಷಯ ಅನ್ಸುತ್ತೆ ಎಂದರು.

Related