ನಿವೇದಿತಾ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌.!

ನಿವೇದಿತಾ ಚಂದನ್‌ ಶೆಟ್ಟಿ ದಂಪತಿ ಡಿವೋರ್ಸ್‌.!

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ನಿವೇದಿತಾ ಮತ್ತು ಚಂದನ್ ಶೆಟ್ಟಿ ಅವರಿಬ್ಬರಿಗೂ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ನಂತರ ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಕುಟುಂಬದವರ ಒಪ್ಪಿಗೆ ಪಡೆದುಕೊಂಡು ಅವರಿಬ್ಬರು ದಂಪತ್ಯ ಜೀವನಕ್ಕೆ ಕಾಲಿಟ್ಟದ್ದರು.

ಆದರಿಗ ಈ ಇಬ್ಬರ ಜೋಡಿಯ ಬಗ್ಗೆ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ಹೌದು, ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ  ಇವರಿಬ್ಬರ ಕುಟುಂಬದಲ್ಲಿ ಈಗ ಬಿರುಕು ಬಿಟ್ಟಿದ್ದು, ಇಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಇಂದೇ (ಜೂನ್​ 7) ಅವರು ಡಿವೋರ್ಸ್​ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. 2017ರಲ್ಲಿ ಪ್ರಸಾರವಾದ ‘ಬಿಗ್​ ಬಾಸ್​ ಕನ್ನಡ ಸೀಸನ್​ 5’ ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ಪರಸ್ಪರ ಪರಿಚಯ ಆಗಿದ್ದರು. ಅವರಿಬ್ಬರ ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್​ ಶೆಟ್ಟಿ ಅವರು ಪ್ರಪೋಸ್​ ಮಾಡಿದ್ದರು. ಬಳಿಕ ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ವಿಜೇತ, ಪರಾಜಿತ ಅಭ್ಯರ್ಥಿಗಳ ಜೊತೆ ಸಮಾಲೋಚನೆ

ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಚಂದನ್​ ಶೆಟ್ಟಿ ಅವರು ವಿನ್ನರ್​ ಆದರೆ, ನಿವೇದಿತಾ ಗೌಡ ಅವರು ಮೂರನೇ ರನ್ನರ್​ ಅಪ್​ ಆಗಿದ್ದರು. ಆ ಶೋನಿಂದ ಇಬ್ಬರ ಖ್ಯಾತಿಯೂ ಹೆಚ್ಚಿತು. ಬಿಗ್​ ಬಾಸ್​ ಮುಗಿದ ಬಳಿಕ ನಿವೇದಿತಾ ಗೌಡ ಅವರು ಇನ್ನೂ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಸೋಶಿಯಲ್​ ಮೀಡಿಯಾದಲ್ಲಿ ಅವರು ಸಖತ್ ಫೇಮಸ್​ ಆಗಿದ್ದಾರೆ. ಚಿತ್ರರಂಗದಲ್ಲಿ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹಾಗೂ ನಟನಾಗಿ ಚಂದನ್​ ಶೆಟ್ಟಿ ಬ್ಯುಸಿ ಆಗಿದ್ದಾರೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮನಸ್ಥಾಪ ಉಂಟಾಗಿರುವ ಸಾಧ್ಯತೆ ಇದೆ.

Related