ನೂತನ ಗ್ರಂಥಾಲಯ ನಿರ್ಮಾಣ

ನೂತನ ಗ್ರಂಥಾಲಯ ನಿರ್ಮಾಣ

ಯಶವಂತಪುರ : ಗ್ರಂಥಾಲಯವು ಜ್ಞಾನದ ಅರಿವಿನ ಕೇಂದ್ರವಾಗಿದ್ದು , ಉತ್ತಮ ಪುಸ್ತಕವನ್ನು ಓದುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಅರಿತುಕೊಳ್ಳಬಹುದಾಗಿದೆ ಎಂದು ಗುರುವಾರ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಯ ಮೊದಲನೇ ಮಹಡಿಯಲ್ಲಿ ನಿರ್ಮಾಣವಾಗಿರುವ ನೂತನ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಓದುವ ಸಂಸ್ಕೃತಿಯನ್ನ ರೂಡಿಸಿಕೊಂಡರೆ ದುಷ್ಚಟಗಳಿಂದ ದೂರವಾಗುವ ಜೊತೆಗೆ ಉತ್ತಮ ಜ್ಞಾನವನ್ನು ಸಂಪಾದಿಸಿ ಕೊಳ್ಳಬಹುದಾಗಿದೆ. ಪುಸ್ತಕಗಳನ್ನು ಓದುವುದರಿಂದಾಗಿ ವಿಶ್ವದ ಇತರ ರಾಷ್ಟ್ರಗಳ ವಿದ್ಯಾಮಾನಗಳ ಬಗ್ಗೆ, ಅಲ್ಲಿನ ವೈವಿಧ್ಯಮಯ ಕಲೆ, ಸಾಹಿತ್ಯ, ಸಂಸ್ಕೃತಿಯ ಅಗತ್ಯ ಜ್ಞಾನವನ್ನು ಪಡೆದು ಕೊಂಡು ಜ್ಞಾನದ ಭಂಡಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ಅರಿವು ಮೂಡಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ ಮಾತನಾಡಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಉತ್ತಮ ಪುಸ್ತಕವನ್ನು ಓದುವುದರಿಂದ ಸಿಗುವ ಸಂತೋಷ ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ ಎಂದರು. ಬಾಲ್ಯದಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿಯನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪದ್ಮ ಬಾಯಿ, ಗೋವಾ ಪಂಚಾಯತಿ ಸದಸ್ಯರಾದ ಸುಕುಮಾರ್, ಪ್ರಸನ್ನ ರುದ್ರ,ಗಂಗ ರೇವಣ್ಣ, ರೇಣುಕುಮಾರ್ ಉಪಸ್ಥಿತರಿದ್ದರು.

Related