ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..!

ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..!

ಬೆಂಗಳೂರು: ನಟಿ ಪವಿತ್ರ ಗೌಡ ಅವರಿಗೆ ರೇಣುಕಾಸ್ವಾಮಿ ಎಂಬುವ ವ್ಯಕ್ತಿ ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿದ್ದ ಎಂಬ ಕಾರಣಕ್ಕೆ ನಟ ದರ್ಶನ್ ಮತ್ತು 10 ಜನ ಗುಂಪು ಸೇರಿ ರೇಣುಕಾ ಸ್ವಾಮಿ  ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ.

ಇನ್ನೂ ಕೊಲೆಗೀಡಾದ ರೇಣುಕಾ ಸ್ವಾಮಿ ಅವರಿಗೆ ಕಳೆದ ವರ್ಷವಷ್ಟೇ ಮದುವೆಯಾಗಿದ್ದು, ಈಗ ಇವರ ಪತ್ನಿ ಐದು ತಿಂಗಳ ಗರ್ಭಿಣಿ ಎಂಬ ಮಾಹಿತಿ ತಿಳಿದು ಬಂದಿದೆ.

ಆದರೆ ರೇಣುಕಾ ಸ್ವಾಮಿ ಅವರ ಪತ್ನಗೆ ಕೊಲೆಯಾಗಿರುವ ಯಾವ ವಿಷಯವನ್ನು ಇದುವರೆಗೂ ತಿಳಿಸಿಲ್ಲವೆಂಬ ಮಾಹಿತಿ ಹೊರಬಿತ್ತಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಂಧನ ಆಗಿದೆ. ಬೇಸರದ ವಿಚಾರ ಏನೆಂದರೆ ದರ್ಶನ್ ಕೊಟ್ಟ ಏಟಿಗೆ ಸಾವನ್ನಪ್ಪಿದ್ದಾನೆ ಎಂಬ ವ್ಯಕ್ತಿಗೆ ಮದುವೆ ಕೂಡ ಆಗಿದ್ದ. ಆತನ ಪತ್ನಿ ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಸದ್ಯ ಪತಿ ಸಾವನ್ನಪ್ಪಿರುವ ಬಗ್ಗೆ ಆಕೆಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಒದನ್ನೂ ಓದಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಪವಿತ್ರಾಗೌಡ ಪೊಲೀಸರ ವಶಕ್ಕೆ

ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ ರೇಣುಕಾಸ್ವಾಮಿ. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದ. ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರಿನ ಅಪೋಲೋ ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ.

 

 

 

Related